Publish Date: Fri, 10 Apr 2020 (10:08 IST)
Updated Date: Fri, 10 Apr 2020 (10:10 IST)
ಮುಂಬೈ: ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಮಾಯಣ’ ಪೌರಾಣಿಕ ಧಾರವಾಹಿಯ ಸುಗ್ರೀವ ಪಾತ್ರಧಾರಿ ಶ್ಯಾಮ ಸುಂದರ ಕಲಾನಿ ಸಾವನ್ನಪ್ಪಿದ್ದಾರೆ.
ರಾಮ ಪಾತ್ರಧಾರಿ ಅರುಣ್ ಗೋವಿಲ್ ಈ ವಿಚಾರವನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ ಮತ್ತು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ವಿಶೇಷವೆಂದರೆ ಅಂದು ಪ್ರಸಾರವಾಗಿದ್ದ ರಾಮಾಯಣ ಧಾರವಾಹಿ ಇದೀಗ ಪ್ರತಿನಿತ್ಯ ಮರಳಿ ಪ್ರಸಾರವಾಗುತ್ತಿದ್ದು, ಭಾರೀ ಹಿಟ್ ಆಗಿದೆ. ಈಗ ಸುಗ್ರೀವ ಮತ್ತು ರಾಮ ರಾವಣನ ಜತೆ ಯದ್ಧಕ್ಕೆ ತೆರಳುವ ಸನ್ನಿವೇಶ ನಡೆಯುತ್ತಿದೆ.