ಧಾರವಾಹಿಗೆ ಸಿಹಿ, ರಿಯಾಲಿಟಿ ಶೋಗಳಿಗೆ ಕಹಿ

ಬುಧವಾರ, 6 ಮೇ 2020 (08:51 IST)
ಬೆಂಗಳೂರು: ಲಾಕ್ ಡೌನ್ ನಡುವೆಯೂ ಟಿವಿ ಧಾರವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಆದರೆ ರಿಯಾಲಿಟಿ ಶೋಗಳಿಗೆ ಇದು ಅನ್ವಯವಾಗಲ್ಲ.

 

ಧಾರವಾಹಿಗಳಿಗೆ ಕೆಲಸ ಮಾಡುವ ನೂರಾರು ಕಾರ್ಮಿಕರ ಹೊಟ್ಟೆಪಾಡು ಗಮನದಲ್ಲಿಟ್ಟುಕೊಂಡು ಟೆಲಿವಿಷನ್ ಅಸೋಸಿಯೇಷನ್ ಕರ್ನಾಟಕ ಮಾಡಿದ ಮನವಿ ಮೇರೆಗೆ ಧಾರವಾಹಿಗಳ ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.

ಹೀಗಾಗಿ ಧಾರವಾಹಿ ತಂಡಗಳಿಗೆ ಈಗ ಸೀಮಿತ ಅವಕಾಶದಲ್ಲಿ ಕ್ರಿಯಾತ್ಮಕವಾಗಿ ಚಿತ್ರೀಕರಿಸುವ ಸವಾಲು ಎದುರಾಗಿದೆ. ಆದರೆ ರಿಯಾಲಿಟಿ ಶೋಗಳು ಇನ್ನೂ ಕೆಲವು ದಿನ ಕಾಯುವುದು ಅನಿವಾರ್ಯವಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪುನರಾರಂಭದ ಚಿಂತೆಯಲ್ಲಿ ಟಿವಿ ಲೋಕ