Select Your Language

Notifications

webdunia
webdunia
webdunia
webdunia

ಚಿತ್ರದುರ್ಗದ ರೈತ ಮಹಿಳೆಯ ನೆರವಿಗೆ ನಿಂತ ನಟ ಅನಿರುದ್ಧ್

ಚಿತ್ರದುರ್ಗದ ರೈತ ಮಹಿಳೆಯ ನೆರವಿಗೆ ನಿಂತ ನಟ ಅನಿರುದ್ಧ್
ಬೆಂಗಳೂರು , ಗುರುವಾರ, 30 ಏಪ್ರಿಲ್ 2020 (09:40 IST)
ಬೆಂಗಳೂರು: ಕಿರುತೆರೆಯಲ್ಲಿ ಆರ್ಯವರ್ಧನ್ ಪಾತ್ರದ ಮೂಲಕ ಮರುಹುಟ್ಟು ಪಡೆದಿರುವ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಚಿತ್ರದುರ್ಗ ಜಿಲ್ಲೆಯ ರೈತ ಮಹಿಳೆಯೊಬ್ಬಳ ಕಷ್ಟಕ್ಕೆ ಕರಗಿ ನೆರವಿಗೆ ನಿಂತಿದ್ದಾರೆ.


ಈರುಳ್ಳಿ ಬೆಳೆದ ರೈತನೊಬ್ಬನ ಮಡದಿ ಸರ್ಕಾರಕ್ಕೆ ತಮ್ಮ ಬೆಳೆಗೆ ತಕ್ಕ ಮಾರುಕಟ್ಟೆ ಒದಗಿಸಿ ಸಂಕಷ್ಟದಿಂದ ಪಾರು ಮಾಡುವಂತೆ ಮನವಿ ಮಾಡಿದ್ದು ಫೇಸ್ ಬುಕ್ ನಲ್ಲಿ ವೈರಲ್ ಆಗಿತ್ತು.

ಈ ಮಹಿಳೆಯ ಕಷ್ಟಕ್ಕೆ ಮರುಗಿದ ನಟ ಅನಿರುದ್ಧ್ ಸಚಿವರಾದ ಬಿಸಿ ಪಾಟೀಲ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ನಾರಾಯಣ ಗೌಡ ಅವರನ್ನು ಸಂಪರ್ಕಿಸಿ ಮಹಿಳೆಯ ಸಮಸ್ಯೆ ವಿವರಿಸಿ ನೆರವಾಗುವಂತೆ ಕೋರಿದ್ದಾರೆ. ಅನಿರುದ್ಧ್ ಮನವಿಗೆ ಸ್ಪಂದಿಸಿರುವ ನಾಯಕರು ಮಹಿಳೆಯ ನೆರವಾಗಲು ಮುಂದೆ ಬಂದಿದ್ದಾರೆ. ಈ ಬಗ್ಗೆ ಖುಷಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನಿರುದ್ಧ್ ನಾವೆಲ್ಲರೂ ರೈತರ ಕಷ್ಟಕ್ಕೆ ನಮ್ಮ ಕೈಲಾದ ರೀತಿಯಲ್ಲಿ ಕೈ ಜೋಡಿಸೋಣ ಎಂದು ಕರೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಡಾಫೆಯಿಂದ ಇರ್ಫಾನ್ ಖಾನ್ ಗೆ ಅಂತಿಮ ಗೌರವ ಸಲ್ಲಿಸಿದ ಸೋನು ನಿಗಂ ಮೇಲೆ ಟೀಕೆ