Publish Date: Mon, 23 Aug 2021 (11:20 IST)
Updated Date: Mon, 23 Aug 2021 (11:21 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ತಮ್ಮ ಮಾನವೀಯತೆಯಿಂದ ಈಗ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ.
ಉಮಾಪತಿ ಗೌಡ ನಿರ್ಮಾಣದ ಮದಗಜ ಸಿನಿಮಾ ಶೂಟಿಂಗ್ ನಲ್ಲಿ ಫೈಟಿಂಗ್ ದೃಶ್ಯವೊಂದರ ಚಿತ್ರೀಕರಣ ವೇಳೆ ಜ್ಯೂನಿಯರ್ ಆರ್ಟಿಸ್ಟ್ ಒಬ್ಬರ ಕಾಲಿಗೆ ಪೆಟ್ಟು ಬಿದ್ದಿದೆ. ತಕ್ಷಣವೇ ಅವರ ಬಳಿ ತೆರಳಿದ ಶ್ರೀಮುರಳಿ ಆ ಕಲಾವಿದನ ಕಾಲು ಹಿಡಿದು ಯೋಗ ಕ್ಷೇಮ ವಿಚಾರಿಸಿದ್ದಲ್ಲದೆ, ಕ್ಷಮೆ ಕೋರಿದ್ದಾರೆ.
ಆಕಸ್ಮಿಕವಾಗಿ ಈ ಘಟನೆ ನಡೆದಿದ್ದರೂ ತಮ್ಮಿಂದಾಗಿ ಆತನಿಗೆ ನೋವಾಗಿದ್ದಕ್ಕೆ ಕ್ಷಮೆ ಕೇಳಿದ ಶ್ರೀಮುರಳಿ ಹೃದಯ ವೈಶಾಲ್ಯತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.