ಬೆಂಗಳೂರು: ನಿನ್ನೆ ಸಹೋದರರ ಬಾಂಧವ್ಯ ಸಾರುವ ರಕ್ಷಾ ಬಂಧನ ಹಬ್ಬವಿತ್ತು. ಈ ದಿನವನ್ನು ಸ್ಯಾಂಡಲ್ ವುಡ್ ತಾರೆಯರೂ ಆಚರಿಸಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ತಮ್ಮ ಮನೆಯಲ್ಲಿ ನಡೆದ ರಕ್ಷಾ ಬಂಧನ ಆಚರಣೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಐರಾ ತಮ್ಮ ಯಥರ್ವ್ ಗೆ ರಾಖಿ ಕಟ್ಟಿ ಕೆನ್ನೆಗೆ ಮುತ್ತುಕೊಟ್ಟು ರಕ್ಷಾ ಬಂಧನ ಆಚರಿಸಿಕೊಂಡರೆ ರಾಕಿಂಗ್ ಸ್ಟಾರ್ ಯಶ್ ಕೂಡಾ ತಮ್ಮ ತಂಗಿ ಕೈಯಲ್ಲಿ ರಾಖಿ ಕಟ್ಟಿಸಿಕೊಂಡು ರಕ್ಷಾ ಬಂಧನ ಆಚರಿಸಿಕೊಂಡಿದ್ದಾರೆ.
ಇನ್ನು, ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ತಮ್ಮ ಮನೆಯಲ್ಲಿ ನಡೆದ ರಕ್ಷಾ ಬಂಧನ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಪುತ್ರಿ ಚಾರಿತ್ರ್ಯ ತಮ್ಮ ವಿಹಾನ್ ಕೈಗೆ ರಾಖಿ ಕಟ್ಟಿ ಸಂಭ್ರಮಿಸಿದರೆ ವಿಹಾನ್ ಅಕ್ಕನ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ. ಈ ಕ್ಯೂಟ್ ಫೋಟೋಗಳನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.