Select Your Language

Notifications

webdunia
webdunia
webdunia
webdunia

ಮಕ್ಕಳ ಕ್ಯೂಟ್ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್..!

webdunia
Bangalore , ಶನಿವಾರ, 17 ಜುಲೈ 2021 (09:53 IST)
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಯಾವಾಗ ತೆರೆಗೆ ಬರಲಿದೆ ಹಾಗೂ ಚಿತ್ರತಂಡ ರಿಲೀಸ್ ದಿನಾಂಕವನ್ನು ಯಾವಾಗ ಪ್ರಕಟಿಸಲಿದೆ ಅಂತ ಕಾತರದಿಂದ ಕಾಯುತ್ತಿದ್ದಾರೆ. ಈ ಹಿಂದೆ ಕೊಟ್ಟಿದ್ದ ಡೇಟ್ನಲ್ಲಿ ಸಿನಿಮಾರಿಲೀಸ್ ಆಗೋದಿಲ್ಲ ಅಂತ ಈ ಹಿಂದೆಯೇ ಪ್ರಶಾಂತ್ ನೀಲ್ ಟ್ವೀಟ್ ಮಾಡುವ ಮೂಲಕ ಸುಳಿವು ನೀಡಿದ್ದರು.


ಯಶ್ ಕಡೆಯಿಂದ ಸಿನಿಮಾ ಕುರಿತಾಗಿ ಯಾವುದಾದರೂ ಅಪ್ಡೇಟ್ ಸಿಗಲಿದೆಯಾ ಅಂತ ಸಿನಿಪ್ರಿಯರು ಕಾಯುತ್ತಿದ್ದರು. ಯಶ್ ಅವರ ಕಡೆಯಿಂದ ಯಾವುದೇ ಸುದ್ದಿ ಸಿಗದಿದ್ದರೂ ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಮಾತ್ರ ಆಗಾಗ ಖುಷಿ ಪಡಿಸುತ್ತಲೇ ಇದ್ದಾರೆ. ಹೌದು, ಸಿನಿಮಾ ಬಗ್ಗೆ ಮಾಹಿತಿ ಸಿಗದಿದ್ದರೇನಂತೆ  ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ತಮ್ಮ ಮುದ್ದು ಮಕ್ಕಳ ವಿಡಿಯೋ ಹಾಗೂ ಫೋಟೋಗಳ ಮೂಲಕ ಅಭಿಮಾನಿಗಳಿಗೆ ಟ್ರೀಟ್ ಕೊಡುತ್ತಲೇ ಇದ್ದಾರೆ.
webdunia

ರಾಧಿಕಾ ಪಂಡಿತ್ ಕೊರೋನಾ ಎರಡನೇ ಅಲೆ ಆರಂಭವಾದಾಗ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ಇನ್ನು ಮುಂದೆ ಸಕಾರಾತ್ಮ ಹಾಗೂ ಖುಷಿ ಕೊಡುವ ಪೋಸ್ಟ್ಗಳನ್ನು ಮಾಡುವುದಾಗಿ ನೆಟ್ಟಿಗರಿಗೆ ಪ್ರಾಮಿಸ್ ಮಾಡಿದ್ದರು. ಅದರಂತೆ ಅವರು ನಡೆದುಕೊಳ್ಳುತ್ತಿದ್ದಾರೆ.
ಹೌದು, ಮಕ್ಕಳ ಕ್ಯೂಟ್ ಹಾಗೂ ತುಂಟಾಟದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ರಾಧಿಕಾ ಅಭಿಮಾನಿಗಳ ಮೊಗದಲ್ಲಿ ನಗು ಮೂಡುವಂತೆ ಮಾಡುತ್ತಿದ್ದಾರೆ. ಈಗಲೂ ಸಹ ಮಗ ಹಾಗೂ ಮಗಳ ತುಂಟಾದ ಮುದ್ದಾದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
webdunia

ಈ ವಿಡಿಯೋವನ್ನು ರಾಧಿಕಾ ಅವರ ಹೊಸ ಮನೆಯಲ್ಲಿ ಚಿತ್ರೀಕರಿಸಲಾಗಿದೆ. ರಾಧಿಕಾ ಪಂಡಿತ್ ಅವರ ತಂದೆ ಮಕ್ಕಳಿಗೆ ಹಾಡು ಹೇಳಿಕೊಡುತ್ತಿರುತ್ತಾರೆ. ಆಗ ಯಥರ್ವ್ ತಾತನ ಕೈಯಿಂದ ಮೈಕ್ ತೆಗೆದುಕೊಳ್ಳುತ್ತಾನೆ. ಅದನ್ನು ಹಿಡುದು ಹಾಡುತ್ತಾ ಓಡಾಡುತ್ತಾನೆ. ಆಗ ಯಥರ್ವ್ ಬಳಿ ಬರುವ ಆಯ್ರಾ ಅಲ್ಲೇ ಕುಣಿಯುತ್ತಿರುತ್ತಾಳೆ. ಆಗ ಯಥರ್ವ್ ಕೈಯಲ್ಲಿದ್ದ ಮೈಕ್ ಅನ್ನು ಮೇಲೆ ಎಸೆಯುತ್ತಾನೆ. ಆ ಆಟದ ಮೈಕ್ ಆಯ್ರಾ ತಲೆ ಮೇಲೆ ಬೀಳುತ್ತದೆ. ಆಗ ಆಯ್ರಾ ವಿಡಿಯೋ ಮಾಡುತ್ತಿರುವ ಅಮ್ಮನ ಬಳಿ ಬಂದು ಮುದ್ದಾಗಿ ಮಮ್ಮಾ ಐ ಗಾಟ್ ಹರ್ಟ್ ಎಂದು ಕ್ಯೂಟಾಗಿ ಹೇಳುತ್ತಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಗಲಿದ ನಟ ಸಂಚಾರಿ ವಿಜಯ್ ಗೆ ಇಂದು ಜನ್ಮದಿನ