Publish Date: Sat, 17 Jul 2021 (09:49 IST)
Updated Date: Sat, 17 Jul 2021 (09:53 IST)
ಬೆಂಗಳೂರು: ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ದುರಂತ ಸಾವು ಕಂಡ ಪ್ರತಿಭಾವಂತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ 39 ನೇ ಜನ್ಮದಿನವಿಂದು. ಆದರೆ ಆ ಸಂಭ್ರಮಾಚರಿಸಲು ಅವರೇ ಇಲ್ಲ.
ಅವರ ಜನ್ಮದಿನದ ಬೆನ್ನಲ್ಲೇ ಅವರ ಸಾಧನೆಗಳ ಕುರಿತಾದ ಪುಸ್ತಕವೊಂದು ಹೊರಬಂದಿದೆ. ಶರಣ್ ಹುಲ್ಲೂರು ಅವರ ಅನಂತವಾಗಿರು ಎಂಬ ಪುಸ್ತಕದಲ್ಲಿ ಸಂಚಾರಿ ವಿಜಯ್ ಜೀವನಗಾಥೆಯಿದೆ.
ಇನ್ನು, ಅವರ ಹುಟ್ಟುಹಬ್ಬದ ಸಂದರ್ಭ ಅಭಿಮಾನಿಗಳು, ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಸ್ಮರಣೆ ಮಾಡಿಕೊಂಡಿದ್ದಾರೆ. ಜೊತೆಗೆ ಅವರು ಸಾವಿನಲ್ಲೂ ಅಂಗದಾನ ಮಾಡುವ ಮೂಲಕ ಸಾರ್ಥಕತೆ ಪಡೆದುಕೊಂಡಿದ್ದನ್ನು ಸ್ಮರಿಸಿದ್ದಾರೆ.