Select Your Language

Notifications

webdunia
webdunia
webdunia
webdunia

ದರ್ಶನ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಇಂದ್ರಜಿತ್ ಭೇಟಿ

ದರ್ಶನ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಇಂದ್ರಜಿತ್ ಭೇಟಿ
ಬೆಂಗಳೂರು , ಶುಕ್ರವಾರ, 16 ಜುಲೈ 2021 (10:43 IST)
ಬೆಂಗಳೂರು: ಮೈಸೂರು ಹೋಟೆಲ್ ನಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ವೇಳೆ ನಟ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಡಿ ಬಾಸ್ ವಿರುದ್ಧ ಕಿಡಿ ಕಾರಿದ್ದರು.


ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ದರ್ಶನ್ ಅರಿತುಕೊಳ್ಳಬೇಕು. ಈ ಬಗ್ಗೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿ ಎಂದಿದ್ದರು.

ಅದರ ಬೆನ್ನಲ್ಲೇ ಇದೀಗ ದರ್ಶನ್ ಮೇಲೆ ಆರೋಪ ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್-ಕುಮಾರಸ್ವಾಮಿ ಭೇಟಿ ಮಾಡಿರುವ ಫೋಟೋವೊಂದು ವೈರಲ್ ಆಗಿದೆ. ಹೀಗಾಗಿ ದರ್ಶನ್ ವಿರುದ್ಧದ ಆರೋಪದ ಹಿಂದೆ ಕುಮಾರಸ್ವಾಮಿ ಬೆಂಬಲ ಇಂದ್ರಜಿತ್ ಗಿದೆಯೇ ಎಂಬ ಅನುಮಾನ ಮೂಡಿಸಿದೆ. ದರ್ಶನ್ ಕೂಡಾ ಮಾಧ್ಯಮಗಳ ಮುಂದೆ ಮಾತನಾಡುವಾಗ ತಮ್ಮ ವಿರುದ್ಧದ ಈ ಎಲ್ಲಾ ಆರೋಪಗಳ ಹಿಂದೆ ಇಂದ್ರಜಿತ್ ಗೆ ಯಾರೋ ಪ್ರಭಾವಿಗಳದ್ದೇ ಕುಮ್ಮಕ್ಕಿದೆ ಎಂದಿದ್ದರು. ಆದರೆ ಈಗ ಹರಿದಾಡುತ್ತಿರುವ ಫೋಟೋ ಈಗಿನದ್ದೇ ಅಥವಾ ಹಳೆಯ ಫೋಟೋವೇ ಎಂಬುದು ಸ್ಪಷ್ಟವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಫೋನ್ ಇಲ್ಲದಿದ್ರೂ ವಾಟ್ಸಪ್ ಮೆಸೇಜ್ ಕಳಿಸಬಹುದು, ಹೇಗೆ ? ಇಲ್ಲಿದೆ ಫುಲ್ ಡೀಟೆಲ್ಸ್