Select Your Language

Notifications

webdunia
webdunia
webdunia
Saturday, 5 April 2025
webdunia

ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಪರ ಅಭಿಮಾನಿಗಳ ಬ್ಯಾಟಿಂಗ್

ದರ್ಶನ್
ಬೆಂಗಳೂರು , ಶುಕ್ರವಾರ, 16 ಜುಲೈ 2021 (09:00 IST)
ಬೆಂಗಳೂರು: ಇಂದ್ರಜಿತ್ ಲಂಕೇಶ್ ನಟ ಚಾಲೆಂಜಿಂಗ್ ಸ್ಟಾರ್ ಮತ್ತು ಸ್ನೇಹಿತರ ಮೇಲೆ ಹಲ್ಲೆ ಆರೋಪ ಹೊರಿಸಿದ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ಪರವಾಗಿ ಮಾತನಾಡಿದ್ದಾರೆ.


ದರ್ಶನ್ ಮತ್ತು ಸ್ನೇಹಿತರು ದಲಿತ ಹೋಟೆಲ್ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ಲಂಕೇಶ‍್ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು, ಅವರಿಂದ ಸಹಾಯ ಪಡೆದವರು ಸಾಮಾಜಿಕ ಜಾಲತಾಣದಲ್ಲಿ ಅವರ ಪರವಾಗಿ ಪೋಸ್ಟ್ ಮಾಡಿದ್ದಾರೆ.

ಒಬ್ಬ ದಲಿತ ಅಭಿಮಾನಿಯಂತೂ ದರ್ಶನ್ ಗೆ ಯಾವ ಜಾತಿಯೂ ಮುಖ್ಯವಲ್ಲ. ಅವರನ್ನು ನೋಡಬೇಕೆಂದು ರಾಮನಗರದಿಂದ ಮಂಡ್ಯಕ್ಕೆ ಹೋಗಿದ್ದೆ. ಕಿಕ್ಕಿರಿದು ತುಂಬಿದ್ದ ಸಾವಿರಾರು ಜನರ ಮಧ‍್ಯೆ ನನಗಾರಿ ಕಾರು ಇಳಿದು ಬಂದು ನನ್ನ ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಪೋಸ್ ನೀಡಿದರು ಎಂದು ಅಭಿಮಾನಿ ತಮ್ಮ ನೆಚ್ಚಿನ ನಟನನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಹಲವು ಅಭಿಮಾನಿಗಳು ಇಂದ್ರಜಿತ್ ಲಂಕೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೊದಲು ನಿಮ್ಮ ಅಕ್ಕ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಮೇಘಾ ಶೆಟ್ಟಿ ಕಡೆಯಿಂದ ಎರಡೆರಡು ಭರ್ಜರಿ ಸಿಹಿ ಸುದ್ದಿ