Publish Date: Fri, 16 Jul 2021 (09:10 IST)
Updated Date: Fri, 16 Jul 2021 (09:23 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸ್ನೇಹಿತರ ವಿರುದ್ಧ ಮೈಸೂರು ಹೋಟೆಲ್ ನಲ್ಲಿ ಹಲ್ಲೆ ಆರೋಪ ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ‍್ ಇಂದು ಮತ್ತೊಂದು ಸುದ್ದಿಗೋಷ್ಠಿ ನಡೆಸಲಿದ್ದಾರಂತೆ.
ದರ್ಶನ್ ಹಲ್ಲೆ ಮಾಡಿದ್ದಾರೆನ್ನಲಾದ ಹೋಟೆಲ್ ನೌಕರನ ಕಣ್ಣಿಗೆ ಪೆಟ್ಟಾಗಿದೆ ಎಂದಿದ್ದ ಇಂದ್ರಜಿತ್ ಇಂದು ಹಲ್ಲೆ ಬಗ್ಗೆ ತಕ್ಕ ಸಾಕ್ಷ್ಯ ಸಮೇತ ಮಾಧ್ಯಮಗಳ ಎದುರು ಬರಲಿದ್ದಾರಂತೆ.
ಇನ್ನು ತಮ್ಮ ಮೇಲೆ ಹಲ್ಲೆ ಆರೋಪ ಮಾಡಿದ ಇಂದ್ರಜಿತ್ ವಿರುದ್ಧ ಕಿಡಿ ಕಾರಿರುವ ಚಾಲೆಂಜಿಂಗ್ ಸ್ಟಾರ್ ಕಾಣದ ಕೈಗಳು ತಮ್ಮ ವಿರುದ್ಧ ಪಿತೂರಿ ನಡೆಸುತ್ತಿವೆ ಎಂದಿದ್ದಾರೆ.