Select Your Language

Notifications

webdunia
webdunia
webdunia
webdunia

ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದ ಶ್ರೀರೆಡ್ಡಿ ಬಯೋಪಿಕ್ ಚಿತ್ರ ಬಿಡುಗಡೆಗೆ ತಡೆ

ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದ ಶ್ರೀರೆಡ್ಡಿ ಬಯೋಪಿಕ್ ಚಿತ್ರ ಬಿಡುಗಡೆಗೆ ತಡೆ
ಹೈದರಾಬಾದ್ , ಗುರುವಾರ, 11 ಮಾರ್ಚ್ 2021 (10:42 IST)
ಹೈದರಾಬಾದ್ : ನಟಿ ನಿರ್ದೇಶಕ ರಾಜಂಗಂ ಅವರು ಈ ಹಿಂದೆ ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದ ನಟಿ ಶ್ರೀರೆಡ್ಡಿ ಅವರ ‘ರೆಡ್ಡಿ ಡೈರಿ’ ಶೀರ್ಷಿಕೆಯ ಜೀವನಚರಿತ್ರೆಯನ್ನು ನಿರ್ಮಿಸುತ್ತಿದ್ದಾರೆ.

ಈ ಚಿತ್ರ ನಟನಾ ಅವಕಾಶಗಳಿಗೆ ಪ್ರತಿಯಾಗಿ ಲೈಂಗಿಕ ಕಿರುಕುಳ ಸ್ವೀಕರಿಸಲು ಒತ್ತಾಯಿಸುವ ಮೂಲಕ ಉದ್ಯಮದ ಗಣ್ಯರು ಯುವ ಮಹತ್ವಾಕಾಂಕ್ಷಿ ನಟಿಯರ ಜೀವನವನ್ನು ಹೇಗೆ ಹಾಳು ಮಾಡುತ್ತಾರೆ ಎಂಬುದನ್ನು ತೆರೆದಿಡುತ್ತದೆ ಎನ್ನಲಾಗಿದೆ. ಈ ಚಿತ್ರವನ್ನು ನಿರ್ಮಾಪಕ ರವಿ ದೇವನ್ ನಿರ್ಮಿಸುತ್ತಿದ್ದಾರೆ.

ಆದರೆ ಇತ್ತೀಚಿಗೆ ಈ ಚಿತ್ರದ ಕೆಲಸಗಳನ್ನು ನಿಲ್ಲಿಸುವಂತೆ ಅಪರಿಚಿತ ವ್ಯಕ್ತಿಗಳು ಫೋನ್ ಕರೆಗಳ ಮೂಲಕ ಬೆದರಿಕೆ ಹಾಕಿದ್ದಾರೆ ಮತ್ತು ಚಿತ್ರ ಬಿಡುಗಡೆ ಮಾಡಲು ತಡೆಯೊಡ್ಡುವುದಾಗಿ ಸವಾಲು ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿರ್ಮಾಪಕರು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗಿನಲ್ಲಿ ಡಬ್ ಮಾಡ್ತಾರಾ ಪುನೀತ್ ರಾಜಕುಮಾರ್?