Publish Date: Thu, 11 Mar 2021 (08:48 IST)
Updated Date: Thu, 11 Mar 2021 (08:52 IST)
ಹೈದರಾಬಾದ್ : ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದು, ಇದು ಈಗ ಟಾಲಿವುಡ್ ಕ್ಷೇತ್ರದಲ್ಲಿ ಚರ್ಚೆಯ ವಿಷಯವಾಗಿದೆ.
ಹೈದರಾಬಾದ್ ನ ಗೀತಾ ಆರ್ಟ್ಸ್ ಕಚೇರಿಯಲ್ಲಿ ಚಿತ್ರದ ಬಗ್ಗೆ ಚರ್ಚಿಸಲು ಭೇಟಿಯಾಗಿದ್ದರು ಎನ್ನಲಾಗಿದೆ. ಅಲ್ಲುಅರ್ಜುನ್ ಕಚೇರಿಯಿಂದ ಹೊರಬರುತ್ತಿರುವ ಫೋಟೊ ಆನ್ ಲೈನ್ ನಲ್ಲಿ ಹರಿದಾಡುತ್ತಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಅವರು ನಟ ಪ್ರಭಾಸ್ ಅವರೊಂದಿಗೆ ಈಗಾಗಲೇ ಸಲಾರ್ ಚಿತ್ರ ಮಾಡುತ್ತಿದ್ದಾರೆ. ಬಳಿಕ ಅವರು ಜೂನಿಯರ್ ಎನ್ ಟಿಆರ್ ಅವರ ಜೊತೆಗೆ ಚಿತ್ರ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರಶಾಂತ್ ನೀಲ್ ಮತ್ತು ಅಲ್ಲು ಅರ್ಜುನ್ ಭೇಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ ಎನ್ನಲಾಗಿದೆ.