Publish Date: Thu, 11 Mar 2021 (09:41 IST)
Updated Date: Thu, 11 Mar 2021 (09:42 IST)
ಹೈದರಾಬಾದ್ : ನಾನಿ ತೆಲುಗು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು. 2008ರಲ್ಲಿ ಬಿಡುಗಡೆಯಾದ ಇಂದ್ರಗಂತಿ ಮೋಹನ್ ಕೃಷ್ಣ ಅವರ ರೋಮ್ ಕಾಮ್ ಅಷ್ಟ ಚಮ್ಮ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ. ಇದೀಗ ನಟ ನಾನಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ.
ಮೂಲಗಳ ಪ್ರಕಾರ ನಟ ನಾನಿ ಅವರು ಜಂಟಲ್ ಮ್ಯಾನ್ ಮತ್ತು ಮಿಡಲ್ ಕ್ಲಾಸ್ ಅಬ್ಬಾಯ್ ಚಿತ್ರದಲ್ಲಿ 10-11 ಕೋಟಿ ರೂ. ಸಂಭಾವನೆ ತೆಗೆದುಕೊಳ್ಳುತ್ತಿದ್ದರಂತೆ. ಆದರೆ ಈಗ ತಮ್ಮ ಸಂಭಾವನೆಯನ್ನು 14 ಕೋಟಿಗೆ ಏರಿಸಿದ್ದಾರಂತೆ. ಇದೀಗ ಅವರು ಶಿವ ನಿರ್ವಾಣ ನಿರ್ದೇಶನದ ತಕ್ ಜಗದೀಶ್ ಚಿತ್ರದಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು 14 ಕೋಟಿ ಸಂಭಾವನೆ ಪಡೆದಿದ್ದಾರಂತೆ.