Select Your Language

Notifications

webdunia
webdunia
webdunia
webdunia

ದೆವ್ವದ ಕತೆ ಹೇಳಲಿದ್ದಾರೆ ಶಿವರಾಜ್ ಕುಮಾರ್

ಶಿವರಾಜ್ ಕುಮಾರ್
ಬೆಂಗಳೂರು: ಬಹುನಿರೀಕ್ಷಿತ ಆಯುಷ್ಮಾನ್ ಭವ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಏನೋ ನಿರೀಕ್ಷೆಯಲ್ಲಿದ್ದ ವೀಕ್ಷಕರಿಗೆ ಟೀಸರ್ ನೋಡಿ ಅಚ್ಚರಿಯಾಗಿದೆ.


ಪಿ ವಾಸು ನಿರ್ದೇಶನದ ಸಿನಿಮಾ ಎಂದರೆ ಅಲ್ಲಿ ದೆವ್ವ, ಭೂತ ಕತೆ ಇರಲೇಬೇಕು. ಅದರಲ್ಲೂ ದ್ವಾರಕೀಶ್ ನಿರ್ಮಾಣದ ಸಿನಿಮಾ ಇದಾಗಿರುವುದರಿಂದ ಟೀಸರ್ ನೋಡುತ್ತಿದ್ದರೆ ಆಪ್ತಮಿತ್ರ, ಆಪ್ತರಕ್ಷಕ ಸಿನಿಮಾ ನೆನಪಾಗುತ್ತದೆ.

ಇಲ್ಲಿ ದೆವ್ವದ ಹಾರರ್ ಕತೆಯಿದೆ ಎನ್ನುವ ಸುಳಿವು ಸಿಕ್ಕಿದೆ. ಜತೆಗೆ ಶಿವಣ್ಣನ ಭರ್ಜರಿ ಫೈಟ್ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಮತ್ತಷ್ಟು ನಯ ಯುವಕನಂತೆ ಕಾಣುವ ಶಿವರಾಜ್ ಕುಮಾರ್ ಲುಕ್ ಅಭಿಮಾನಿಗಳಿಗೆ ಭಾರೀ ಇಷ್ಟವಾಗಿದೆ. ನವಂಬರ್ 1 ರಂದು ಚಿತ್ರ ತೆರೆ ಕಾಣಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯಲ್ಲಿ ಮುಗಿದಿಲ್ಲ ರವಿ ಬೆಳಗೆರೆ ಜರ್ನಿ?!