Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಲ್ಲಿ ಮುಗಿದಿಲ್ಲ ರವಿ ಬೆಳಗೆರೆ ಜರ್ನಿ?!

ಬಿಗ್ ಬಾಸ್ ಮನೆಯಲ್ಲಿ ಮುಗಿದಿಲ್ಲ ರವಿ ಬೆಳಗೆರೆ ಜರ್ನಿ?!
ಬೆಂಗಳೂರು , ಮಂಗಳವಾರ, 15 ಅಕ್ಟೋಬರ್ 2019 (09:17 IST)
ಬೆಂಗಳೂರು: ಆರೋಗ್ಯ ಸಮಸ್ಯೆಯಿಂದಾಗಿ ಬಿಗ್ ಬಾಸ್ ಮನೆಯೊಳಗೆ ಹೋದ ಒಂದೇ ದಿನದೊಳಗೆ ಮರಳಿ ಬಂದಿರುವ ಪತ್ರಕರ್ತ ರವಿ ಬೆಳಗೆರೆ ನಿನ್ನೆಯ ಶೋನಲ್ಲಿ ಕಾಣಿಸಿಕೊಂಡಿರುವುದು ನೋಡಿದರೆ ಮತ್ತೆ ಶೋಗೆ ವಾಪಸ್ ಬಂದಿದ್ದಾರಾ ಎನಿಸುತ್ತಿದೆ.


ರವಿ ಬೆಳಗೆರೆ ಲೋ ಬಿಪಿ ಮತ್ತು ಶುಗರ್ ಸಮಸ್ಯೆಯಿಂದಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಯಾದ ಮರುದಿನವೇ ಹೊರಗೆ ಬಂದಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರು.

ಅಲ್ಲಿಗೆ ರವಿ ಬೆಳಗೆರೆ ಬಿಗ್ ಬಾಸ್ ಜರ್ನಿ ಮುಗಿಯಿತು ಎಂದುಕೊಳ್ಳಬೇಕಿಲ್ಲ. ಯಾಕೆಂದರೆ ಕಲರ್ಸ್ ವಾಹಿನಿ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಅದರ ಬದಲು ಕಲರ್ಸ್ ವಾಹಿನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ‘ಹೊರಗೆ ಯಾರು ಏನೇ ಹೇಳಿದರೂ ಮನೆಯಲ್ಲಿ ಏನಾಗ್ತಿದೆ ಅನ್ನೋದು ಬಿಗ್ ಬಾಸ್ ಗಷ್ಟೇ ಗೊತ್ತು. ರವಿ ಬೆಳಗೆರೆ ದೊಡ್ಮನೆಯಲ್ಲಿ ಕುಣಿದುಕೊಂಡು ಆರಾಮವಾಗಿದ್ದಾರೆ’ ಎಂದು ಬರೆದುಕೊಂಡಿದೆ.

ಈ ಹಿಂದೆ ಹಲವು ಬಾರಿ ಬಿಗ್ ಬಾಸ್ ಸ್ಪರ್ಧಿಗಳು ಆರೋಗ್ಯ ಸಮಸ್ಯೆಗೆ ತುತ್ತಾದಾಗ ಚಿಕಿತ್ಸೆ ಪಡೆದು ಶೋಗೆ ಮರಳಿದ್ದೂ ಇದೆ. ಹೀಗಾಗಿ ರವಿ ಬೆಳಗೆರೆ ಕೂಡಾ ಮರಳಿದ್ದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದ ರವಿಬೆಳಗೆರೆ