Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯೊಳಗೆ ಚಂದ್ರಿಕಾ! ಹಾಗಿದ್ರೆ ಇನ್ನು ಅಗ್ನಿಸಾಕ್ಷಿ ಗತಿಯೇನು?!

ಬಿಗ್ ಬಾಸ್ ಮನೆಯೊಳಗೆ ಚಂದ್ರಿಕಾ! ಹಾಗಿದ್ರೆ ಇನ್ನು ಅಗ್ನಿಸಾಕ್ಷಿ ಗತಿಯೇನು?!
ಬೆಂಗಳೂರು , ಸೋಮವಾರ, 14 ಅಕ್ಟೋಬರ್ 2019 (09:23 IST)
ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಿನ್ನೆ ಲಾಂಚ್ ಆಗಿದ್ದು, ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ಚಂದ್ರಿಕಾ ಅಲಿಯಾಸ್ ಪ್ರಿಯಾಂಕಾ ಎಂಟ್ರಿಯಾಗಿದ್ದು ನೋಡಿ ವೀಕ್ಷಕರಲ್ಲಿ ಹಲವು ಪ್ರಶ್ನೆಗಳು ಮೂಡಿವೆ.


ಅಗ್ನಿಸಾಕ್ಷಿ ಧಾರವಾಹಿಯ ಪ್ರಮುಖ ಆಕರ್ಷಣೆಗಳಲ್ಲಿ ವಿಲನ್ ಚಂದ್ರಿಕಾ ಕೂಡಾ ಒಬ್ಬರು. ಆದರೆ ಧಾರವಾಹಿ ಇನ್ನೂ ಮುಕ್ತಾಯವಾಗಿಲ್ಲ. ಅದರ ಬಗ್ಗೆ ಸುದ್ದಿಯೂ ಬಂದಿಲ್ಲ. ಹೀಗಿರುವಾಗ ಚಂದ್ರಿಕಾ ಬಿಗ್ ಬಾಸ್ ಮನೆಯೊಳಗೆ ಎಂಟ್ರಿಯಾಗಿರುವುದು ನೋಡಿ ಹಾಗಿದ್ರೆ ಧಾರವಾಹಿ ಮುಗಿಯಿತಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ.

ಕೆಲವರು ಅಬ್ಬಾ.. ಇನ್ನಾದ್ರೂ ಧಾರವಾಹಿ ಮುಗಿದೇ ಹೋಯಿತು ಎಂದು ಖುಷಿಯನ್ನೂ ಪ್ರಕಟಿಸಿದ್ದಾರೆ. ಆದರೆ ಮೂಲಗಳ ಪ್ರಕಾರ ಧಾರವಾಹಿ ನಿಲ್ಲುತ್ತಿಲ್ಲ. ಆದರೆ ಚಂದ್ರಿಕಾ ಪಾತ್ರಧಾರಿಯ ಕತೆ ಮುಗಿಯುತ್ತಿದೆ ಎನ್ನಲಾಗಿದೆ. ಹಾಗಿದ್ದರೆ ಅಗ್ನಿಸಾಕ್ಷಿಯ ಕತೆಯಲ್ಲಿ ಹೊಸ ವಿಲನ್ ಯಾರು ಎಂಬುದು ಮುಂಬರುವ ಎಪಿಸೋಡ್ ಗಳಲ್ಲಿ ಗೊತ್ತಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಬಿಗ್ ಕುಳಗಳಿಗೇ ಕೈ ಹಾಕಿದ ಬಿಗ್ ಬಾಸ್