Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಶೋನಲ್ಲಿ ಈ ಬಾರಿ ಯಾರೆಲ್ಲಾ ಇರ್ತಾರೆ? ವೀಕ್ಷಕರ ವೋಟ್ ಹೀಗಿದೆ ನೋಡಿ!

ಬಿಗ್ ಬಾಸ್ ಶೋನಲ್ಲಿ ಈ ಬಾರಿ ಯಾರೆಲ್ಲಾ ಇರ್ತಾರೆ? ವೀಕ್ಷಕರ ವೋಟ್ ಹೀಗಿದೆ ನೋಡಿ!
ಬೆಂಗಳೂರು , ಶನಿವಾರ, 12 ಅಕ್ಟೋಬರ್ 2019 (09:08 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಜನಪ್ರಿಯ ಶೋ ಬಿಗ್ ಬಾಸ್ ಕನ್ನಡ ಸೀಸನ್ 7 ‍ಕ್ಕೆ ನಾಳೆಯಿಂದ ಚಾಲನೆ ಸಿಗಲಿದೆ. ಈ ಬಾರಿ ಯಾವೆಲ್ಲಾ ಸ್ಪರ್ಧಿಗಳು ಶೋನಲ್ಲಿ ಪಾಲ್ಗೊಳ್ಳಬಹುದು ಎಂಬ ಬಗ್ಗೆ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ವೋಟ್ ಮಾಡುತ್ತಿದ್ದಾರೆ.


ಈ ಬಾರಿ ಒಟ್ಟು 17 ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಲಿದ್ದಾರೆ ಎಂದು ಬಿಗ್ ಬಾಸ್ ತಂಡ ಈಗಾಗಲೇ ಸ್ಪಷ್ಟನೆ ನೀಡಿದೆ. ಇದುವರೆಗೆ 15 ಸ್ಪರ್ಧಿಗಳು ಭಾಗವಹಿಸುತ್ತಿದ್ದರು.

ವೀಕ್ಷಕರ ಪ್ರಕಾರ ಈ ಬಾರಿ ಕುರಿ ಪ್ರತಾಪ್, ಹನುಮಂತಪ್ಪ, ತಬಲಾ ನಾಣಿ, ಚಿನ್ನಪ್ಪ, ರವಿಬೆಳಗೆರೆ, ದೀಪಿಕಾ ದಾಸ್, ಶ್ವೇತಾ ಆರ್ ಪ್ರಸಾದ್ ಮುಂತಾದವರು ಶೋನಲ್ಲಿ ಪಾಲ್ಗೊಳ್ಳಬೇಕಂತೆ. ಇನ್ನು ಕೆಲವರು ಹಾಸ್ಯ ನಟ ಚಿಕ್ಕಣ್ಣ, ಹಿರಿಯ ನಟ ಜೈ ಜಗದೀಶ್, ರಾಗಿಣಿ ದ್ವಿವೇದಿ ಮುಂತಾದವರ ಹೆಸರೂ ಹೇಳುತ್ತಿದ್ದಾರೆ. ಆದರೆ ವೀಕ್ಷಕರ ಹೆಚ್ಚು ವೋಟ್ ಬಿದ್ದಿರುವುದು ನಟ ಕುರಿ ಪ್ರತಾಪ್ ಗೆ. ಆದರೆ ಅಂತಿಮ ಲಿಸ್ಟ್ ಭಾನುವಾರ 6 ಗಂಟೆಗೆ ಗೊತ್ತಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆ.18ರಿಂದ ಆರಂಭವಾಗಲಿದೆ ರೋರಿಂಗ್ ಸ್ಟಾರ್ ಭರಾಟೆ!