Select Your Language

Notifications

webdunia
webdunia
webdunia
webdunia

ಇಂದಿನಿಂದ ಬಿಗ್ ಬಾಸ್ ಆರಂಭ: ಈ ಬಾರಿ ಶೋ ಕಳೆಗಟ್ಟಿರುವುದು ಈ ಕಾರಣಕ್ಕೆ!

ಇಂದಿನಿಂದ ಬಿಗ್ ಬಾಸ್ ಆರಂಭ: ಈ ಬಾರಿ ಶೋ ಕಳೆಗಟ್ಟಿರುವುದು ಈ ಕಾರಣಕ್ಕೆ!
ಬೆಂಗಳೂರು , ಭಾನುವಾರ, 13 ಅಕ್ಟೋಬರ್ 2019 (09:04 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ ಸೀಸನ್ 7 ಇಂದಿನಿಂದ ಆರಂಭವಾಗಲಿದೆ. ಇಂದು ಸಂಜೆ 6 ಗಂಟೆಯಿಂದ ಕಲರ್ಸ್ ವಾಹಿನಿಯಲ್ಲಿ ಲಾಂಚ್ ಕಾರ್ಯಕ್ರಮ ಪ್ರಸಾರವಾಗಲಿದೆ.


ಕೊನೆಯ ಕ್ಷಣದವರೆಗೂ ಸ್ಪರ್ಧಿಗಳ ಮಾಹಿತಿ ಗೌಪ್ಯವಾಗಿಡಲಾಗುತ್ತದೆ. ಹೀಗಾಗಿ ಯಾವೆಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಬಹುದು ಎಂಬ ಕುತೂಹಲ ವೀಕ್ಷಕರಲ್ಲಿದೆ.

ಈ ಬಾರಿ ಕೇವಲ ಸೆಲೆಬ್ರಿಟಿಗಳು ಸ್ಪರ್ಧಿಸುತ್ತಿದ್ದಾರೆ. ಕಾಮನ್ ಮ್ಯಾನ್ ಗಳಿಗೆ ಅವಕಾಶವಿಲ್ಲ. ಅದರಲ್ಲೂ ಸ್ಪರ್ಧಿಗಳಾಗಿ ಪ್ರಮುಖ ಹೆಸರುಗಳೇ ಕೇಳಿಬರುತ್ತಿವೆ. ಹೀಗಾಗಿ ಕಿಚ್ಚ ಸುದೀಪ್ ನಡೆಸಿಕೊಡುವ ಈ ಶೋ ಮೇಲೆ ಕುತೂಹಲ ಹೆಚ್ಚಿದೆ.

Share this Story:

Follow Webdunia kannada

ಮುಂದಿನ ಸುದ್ದಿ

`ಗಂಟುಮೂಟೆ’ಯೊಳಗಿನ ಬೆರಗನ್ನು ಮೆಚ್ಚಿಕೊಂಡ ಕಿಚ್ಚ!