ಬೆಂಗಳೂರು: ನೆರೆ ಪರಿಹಾರ ಕೇಳಲು ಹೋದರೆ ಲಂಚ ಕೇಳುವುದು, ಅಲೆದಾಡಿಸುವುದು ಮಾಡುವ ಅಧಿಕಾರಿಗಳನ್ನು ಸುಮ್ಮನೇ ಬಿಡಬೇಡಿ. ಸರಿಯಾಗಿ ಬುದ್ಧಿ ಕಲಿಸಿ ಎಂದು ನಟ, ಬಿಜೆಪಿ ನಾಯಕ ಜಗ್ಗೇಶ್ ಟ್ವಿಟರ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳನ್ನು ಭೇಟಿ ಮಾಡಲು ಹೋಗುವಾಗ ಕೈಯಲ್ಲಿ ಮೊಬೈಲ್ ಕೊಂಡೊಯ್ಯಲು ಮರೆಯಬೇಡಿ. ಒಂದು ವೇಳೆ ಅಧಿಕಾರಿಗಳು ಲಂಚ ಕೇಳಿದರೆ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಎಂದು ಜಗ್ಗೇಶ್ ಹೇಳಿದ್ದಾರೆ.
‘ಮೊಬೈಲ್ ನಲ್ಲಿ ಅಧಿಕಾರಿಗಳ ಜತೆ ನೆರೆ ಪರಿಹಾರದ ಕುರಿತು ನಡೆಸುವ ಮಾತುಕತೆ ರೆಕಾರ್ಡ್ ಮಾಡಿ. ಇದು ನೊಂದವರಿಗೆ ಉಪಯೋಗಕ್ಕೆ ಬರುತ್ತದೆ. ನೊಂದವರ ಪರಿಹಾರ ಕಬಳಿಸುವವರ ಬಗ್ಗೆ ಎಚ್ಚರ! ಸರ್ವನಾಶವಾಗುತ್ತೀರಿ ನೊಂದವರ ಹಣ ನುಂಗಿದರೆ’ ಎಂದು ಜಗ್ಗೇಶ್ ಎಚ್ಚರಿಕೆ ನೀಡಿದ್ದಾರೆ.