Select Your Language

Notifications

webdunia
webdunia
webdunia
webdunia

ಸೃಜನ್ ಲೋಕೇಶ್ ಎಲ್ಲಿದ್ದೆ ಇಲ್ಲಿ ತನಕ ಇಂದಿನಿಂದ: ವಿಶ್ ಮಾಡಿದ ದರ್ಶನ್

ಸೃಜನ್ ಲೋಕೇಶ್ ಎಲ್ಲಿದ್ದೆ ಇಲ್ಲಿ ತನಕ ಇಂದಿನಿಂದ: ವಿಶ್ ಮಾಡಿದ ದರ್ಶನ್
ಬೆಂಗಳೂರು , ಶುಕ್ರವಾರ, 11 ಅಕ್ಟೋಬರ್ 2019 (10:11 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತ್ಯಂತ ಆಪ್ತ ಮಿತ್ರನೆಂದರೆ ಸೃಜನ್ ಲೋಕೇಶ್. ಸೃಜನ್ ನಿರ್ಮಿಸಿ ನಟಿಸಿರುವ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಇಂದಿನಿಂದ ತೆರೆ ಕಾಣುತ್ತಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದಾರೆ.


ಲೋಕೇಶ್ ಪ್ರೊಡಕ್ಷನ್ ನಡಿಯಲ್ಲಿ ಸೃಜನ್ ನಿರ್ಮಿಸಿ ನಟಿಸಿರುವ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದಲ್ಲಿ ಸೃಜನ್ ಗೆ ಜತೆಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಈ ಸಿನಿಮಾ ಇಂದು ತೆರೆ ಕಂಡಿದೆ.

ಗೆಳೆಯ ಸಿನಿಮಾಗೆ ವಿಶ್ ಮಾಡಿರುವ ದರ್ಶನ್ ‘ನಮ್ಮ ಲೋಕೇಶ್ ಪ್ರೊಡಕ್ಷನ್ ನಿಂದ ಮೂಡಿಬಂದಿರುವ ಎಲ್ಲಿದ್ದೆ ಇಲ್ಲಿ ತನಕ ಬಿಡುಗಡೆಯಾಗುತ್ತಿದೆ. ಸೃಜನ್ ಹಾಗೂ ಚಿತ್ರತಂಡಕ್ಕೆ ಶುಭವಾಗಲಿ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ’ ಎಂದು ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಮುರಳಿ ಭರಾಟೆ ರಿಲೀಸ್ ಡೇಟ್ ಅನೌನ್ಸ್ ಆಯ್ತು