Select Your Language

Notifications

webdunia
webdunia
webdunia
webdunia

ಎಲ್ಲಿದ್ದೆ ಇಲ್ಲಿತನಕ: ಕಚಗುಳಿಯಿಡಲು ರೆಡಿಯಾಗಿದೆ ರೊಮ್ಯಾಂಟಿಕ್ ಕಾಮಿಡಿ ಕಥೆ!

ಎಲ್ಲಿದ್ದೆ ಇಲ್ಲಿತನಕ: ಕಚಗುಳಿಯಿಡಲು ರೆಡಿಯಾಗಿದೆ ರೊಮ್ಯಾಂಟಿಕ್ ಕಾಮಿಡಿ ಕಥೆ!
ಬೆಂಗಳೂರು , ಗುರುವಾರ, 10 ಅಕ್ಟೋಬರ್ 2019 (18:34 IST)
ತೇಜಸ್ವಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ ಎಲ್ಲಿದ್ದೆ ಇಲ್ಲಿತನಕ. ಈಗಾಗಲೇ ಬಿಡುಗಡೆಯಾಗಿರೋ ಹಾಡುಗಳು ಮತ್ತು ಟ್ರೇಲರ್ ಮೂಲಕ ಈ ಸಿನಿಮಾ ಬಗ್ಗೆ ಪ್ರತೀ ಪ್ರೇಕ್ಷಕರೂ ಆಕರ್ಷಿತರಾಗಿದ್ದಾರೆ.

ಈ ಮೂಲಕ ಸೃಜನ್ ಲೋಕೇಶ್ ಬೇರೆಯದ್ದೇ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬುದೂ ಸಾಬೀತಾಗಿದೆ. ಆದರೆ ಇದರಲ್ಲಿ ಸೃಜನ್ ಯಾವ ಥರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ? ಅವರಿಲ್ಲಿ ಪಕ್ಕಾ ಆಕ್ಷನ್ ಅವತಾರದಲ್ಲಿ ನಟಿಸಿದ್ದಾರಾ? ಅಷ್ಟಕ್ಕೂ ಇದರ ಕಥೆಯೇನು ಎಂಬೆಲ್ಲ ಪ್ರಶ್ನೆಗಳು ಪ್ರೇಕ್ಷಕರಲ್ಲಿವೆ.
webdunia
ಇದಕ್ಕೆ ಚಿತ್ರತಂಡದ ಕಡೆಯಿಂದ ಸಿಗೋ ಉತ್ತರ ಕೂಡಾ ಅಷ್ಟೇ ಮಜವಾಗಿದೆ. ನಿರ್ದೇಶಕ ತೇಜಸ್ವಿ ಹೇಳೋ ಪ್ರಕಾರ ಇದು ಮನೋರಂಜನೆಯ ಎಲ್ಲ ರಸಗಳನ್ನೂ ಕೂಡಾ ಹದ ಮುದವಾಗಿ ಬೆರೆಸಿ ಸಿದ್ಧಗೊಳಿಸಿರೋ ಚಿತ್ರ. ಸೃಜನ್ ಲೋಕೇಶ್ ಅವರಿಗೆ ಲೋಕೇಶ್ ಪ್ರಡಕ್ಷನ್ಸ್ ಬ್ಯಾನರಿನಡಿಯಲ್ಲಿ ಒಂದು ಸಿನಿಮಾ ಮಾಡಬೇಕೆಂಬ ಪ್ರಸ್ತಾಪ ಬಂದಾಗಲೇ ಮಜಾ ಟಾಕೀಸ್ ತಂಡ ಕಥೆಯ ಚರ್ಚೆಗೆ ಚಾಲನೆ ನೀಡಿತ್ತು. ಆ ಬಳಿಕ ಮಾಸ್ ಕಥೆ ಸೇರಿದಂತೆ ನಾನಾ ಥರದ ಕಥೆಗಳೂ ಕೂಡಾ ಚರ್ಚೆಗೆ ಬಂದಿದ್ದವು. ಆದರೆ ಒಂದೇ ಮಾದರಿಯ ಕಥೆ ಹೊಸೆಯೋದಕ್ಕಿಂತ ಎಲ್ಲ ಬಗೆಯ ಅಂಶಗಳನ್ನೂ ಸೇರಿಸಿ ಚಿತ್ರ ಮಾಡಿದರೇ ಉತ್ತಮ ಎಂಬಂಥಾ ಒಕ್ಕೊರಲಿನ ಅಭಿಪ್ರಾಯವೇ ಕೇಳಿ ಬಂದಿತ್ತು.
webdunia
ಅದಾದ ನಂತರ ನಿರ್ದೇಶಕ ತೇಜಸ್ವಿ ರೂಪಿಸಿದ್ದ ಎಲ್ಲಿದ್ದೆ ಇಲ್ಲಿತನಕ ಕಥೆಯನ್ನು. ಇದರಲ್ಲಿ ಮನೋರಂಜನೆಯನ್ನೇ ಮೂಲ ಉದ್ದೇಶವಾಗಿಸಿಕೊಂಡಿರೋ ಗಟ್ಟಿ ಕಥೆಯಿದೆ. ಪ್ರೀತಿ, ಫ್ಲಾಮಿಲಿ ಸೆಂಟಿಮೆಂಟು ಸೇರಿದಂತೆ ಎಲ್ಲವನ್ನೂ ಒಳಗೊಂಡಿರೋ ಎಲ್ಲಿದ್ದೆ ಇಲ್ಲಿತನಕ ರೊಮ್ಯಾಂಟಿಕ್ ಕಾಮಿಡಿ ಜಾನರಿನ ಚಿತ್ರ ಎನ್ನಲಡ್ಡಿಯಿಲ್ಲ. ಇಲ್ಲಿ ಸೃಜನಾ ನಾನಾ ಭಾವಗಳ ಶೇಡುಗಳಿರೋ ಪಾತ್ರದಲ್ಲಿಯೂ ಅಚ್ಚರಿದಾಯಕವಾಗಿ ನಟಿಸಿದ್ದಾರಂತೆ. ಅದೆಲ್ಲದರ ಅಸಲೀ ಹೂರಣ ಇದೇ ತಿಂಗಳ 11ರಂದು ಪ್ರೇಕ್ಷಕರೆದುರು ಅನಾವರಣಗೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಿದ್ದೆ ಇಲ್ಲೀತನಕ: ಮಜಾ ನೀಡೋ ಸೃಜಾಗೆ ಅಪ್ಪನ ಭಯ!