Select Your Language

Notifications

webdunia
webdunia
webdunia
webdunia

ಡಾರ್ಲಿಂಗ್ ಕೃಷ್ಣನ ‘ಲವ್’ ಗೆ ಕಿಚ್ಚ ಸುದೀಪ್ ಸಹಾಯ

webdunia
ಸೋಮವಾರ, 14 ಅಕ್ಟೋಬರ್ 2019 (09:43 IST)
ಬೆಂಗಳೂರು: ಕಿಚ್ಚ ಸುದೀಪ್ ಹೊಸಬರ ಸಿನಿಮಾಗಳಲ್ಲಿ ಪ್ರೋತ್ಸಾಹ ಕೊಡಲು ಹಿಂದೆ ಮುಂದೆ ನೋಡಲ್ಲ. ಏನೂ ಇಲ್ಲವೆಂದರೂ ತಮ್ಮ ಪ್ರೋತ್ಸಾಹದ ಮಾತನ್ನು ಟ್ವೀಟ್ ಮಾಡಿ ಬೆಂಬಲಿಸುತ್ತಾರೆ.


ಇದೀಗ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರುವ ಲವ್ ಮಾಕ್ ಟೈಲ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಹದಿಹರೆಯದ ಹುಡುಗನಾಗಿ ಕಾಣಿಸಿಕೊಂಡಿರುವ ಡಾರ್ಲಿಂಗ್ ಕೃಷ್ಣ ಇವರೇನಾ ಎನ್ನುವಷ್ಟು ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ಇದರಲ್ಲಿರುವ ಕಾಮಿಡಿ, ಪ್ರೀತಿಯ ದೃಶ್ಯಗಳು ವೀಕ್ಷಕರನ್ನು ಸೆಳೆಯುತ್ತಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಈ ಟ್ರೈಲರ್ ಗೆ ಕಿಚ್ಚ ಸುದೀಪ್ ಹಿನ್ನಲೆ ಧ್ವನಿ ನೀಡಿದ್ದಾರೆ. ಇದುವೇ ಎಲ್ಲರನ್ನೂ ಸೆಳೆಯುತ್ತಿದೆ. ಜತೆಗೆ ಟ್ರೈಲರ್ ಬಗ್ಗೆ ಮೆಚ್ಚುಗೆ ಮಾತನಾಡಿರುವ ಕಿಚ್ಚ ನಿರ್ದೇಶಕನಾಗಿ ಮೊದಲ ಹೆಜ್ಜೆಯಿಡುತ್ತಿರುವ ಕೃಷ್ಣನಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಸಿಂಗಿಂಗ್ ಶೋನಲ್ಲಿ ಲೂಸ್ ಮಾದ ಯೋಗಿ!