Publish Date: Wed, 29 May 2019 (08:15 IST)
Updated Date: Wed, 29 May 2019 (08:17 IST)
ಬೆಂಗಳೂರು: ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿಯುತ್ತಿರುವ ನಟ ದುನಿಯಾ ವಿಜಯ್ ಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಶುಭಾಷಯ ಹೇಳಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ನಟರು ನಿರ್ದೇಶಕರಾಗುವುದು ಹೊಸತೇನಲ್ಲ. ಆ ಸಾಲಿಗೆ ಇದೀಗ ದುನಿಯಾ ವಿಜಯ್ ಕೂಡಾ ಸೇರ್ಪಡೆಯಾಗುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಹಲವು ವಿವಾದಗಳ ಬಳಿಕ ಇದೀಗ ವಿಜಿ ‘ಸಲಗ’ ಸಿನಿಮಾ ನಿರ್ದೇಶನದ ಮೂಲಕ ಪುನರಾಗಮನ ಮಾಡುತ್ತಿದ್ದಾರೆ.
ದುನಿಯಾ ವಿಜಿಗೆ ಈಗಾಗಲೇ ಕಿಚ್ಚ ಸುದೀಪ್ ಶುಭ ಹಾರೈಸಿದ್ದರು. ಈಗ ಶಿವರಾಜ್ ಕುಮಾರ್ ಸರದಿ. ಇಷ್ಟು ದಿನ ನಟನಾಗಿ ಗುರುತಿಸಿದ್ದೀರಿ. ಇನ್ನು ನಿರ್ದೇಶಕರಾಗಿ ಬೆಳೆಯಿರಿ ಎಂದು ಶಿವಣ್ಣ ಹಾರೈಸಿದ್ದಾರೆ.