Publish Date: Tue, 28 May 2019 (11:33 IST)
Updated Date: Tue, 28 May 2019 (11:35 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಇಂದು ಮತ್ತು ನಾಳೆ ಮಗಳು ಗೀತಾಂಜಲಿ ಮದುವೆ ಸಂಭ್ರಮ. ಮಗಳ ಮದುವೆಗಾಗಿ ಅದ್ಧೂರಿ ಸೆಟ್, ತಯಾರಿ ಮಾಡಿಕೊಂಡಿರುವ ರವಿಚಂದ್ರನ್ ಅಭಿಮಾನಿಗಳನ್ನೂ ಪ್ರೀತಿಯಿಂದ ಆಹ್ವಾನಿಸಿದ್ದಾರೆ.
ಈ ನಡುವೆ ಫ್ಯಾಮಿಲಿ ಜತೆ ರವಿಚಂದ್ರನ್ ಕುಣಿದು ಕುಪ್ಪಳಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ನಿ ಜತೆ ತಮ್ಮ ಟ್ರೇಡ್ ಮಾರ್ಕ್ ನೃತ್ಯ ಮಾಡುವ ರವಿಚಂದ್ರನ್ ಫುಲ್ ಹ್ಯಾಪಿ ಮೂಡ್ ನಲ್ಲಿದ್ದಾರೆ.
ಇಂದು ಮತ್ತು ನಾಳೆ ಅರಮನೆ ಮೈದಾನದಲ್ಲಿ ಅದ್ಧೂರಿ ಸೆಟ್ ನಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದು, ಸಿನಿ ರಂಗದ ಗಣ್ಯರು, ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.