Select Your Language

Notifications

webdunia
webdunia
webdunia
webdunia

ಉಪೇಂದ್ರಗೆ ಹೊಸ ಸಿನಿಮಾ! ಮೇಘನಾ ರಾಜ್ ಗೆ ಎರಡನೇ ಸಿನಿಮಾ!

ಉಪೇಂದ್ರಗೆ ಹೊಸ ಸಿನಿಮಾ! ಮೇಘನಾ ರಾಜ್ ಗೆ ಎರಡನೇ ಸಿನಿಮಾ!
ಬೆಂಗಳೂರು , ಶನಿವಾರ, 25 ಮೇ 2019 (07:58 IST)
ಬೆಂಗಳೂರು: ಅರೇ ಅದು ಹೇಗೆ ಸಾಧ‍್ಯ? ಉಪೇಂದ್ರ ಈಗಾಗಲೇ ಸಾಕಷ್ಟು ಸಿನಿಮಾ ಮಾಡಿ ತಮ್ಮದೇ ಸ್ಟಾರ್ ಗಿರಿ ಹೊಂದಿದವರು. ಮೇಘನಾ ಕೂಡಾ ಈಗಾಗಲೇ ಕೆಲವು ಸಿನಿಮಾ ಮಾಡಿದವರೇ. ಇಬ್ಬರಿಗೂ ಇದು ಹೊಸದು, ಎರಡನೆಯದು ಸಿನಿಮಾ ಆಗಲು ಹೇಗೆ ಸಾಧ್ಯ ಎಂದುಕೊಳ್ಳಬೇಡಿ.


ಉಪೇಂದ್ರ ಐ ಲವ್ ಯೂ ಸಿನಿಮಾ ನಂತರ ಇದೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದೂ ಅವರ ಸೂಪರ್ ಹಿಟ್ ಸಿನಿಮಾ ಬುದ್ಧಿವಂತದ ಅದೇ ಟೈಟಲ್ ಇಟ್ಟುಕೊಂಡು ಎರಡನೇ ಭಾಗ ಮಾಡುತ್ತಿದ್ದಾರೆ.

ಅತ್ತ ಮೇಘನಾ ಮದುವೆ ಬಳಿಕ ದಿಗಂತ್ ಜತೆಗೆ ಹೊಸ ಸಿನಿಮಾ ಒಪ್ಪಿಕೊಂಡಿದ್ದರು. ಇದಾದ ಬಳಿಕ ಇದೀಗ ಉಪೇಂದ್ರ ಜತೆಗೆ ಬುದ್ಧಿವಂತ 2 ಗೆ ನಾಯಕಿಯಾಗಿದ್ದಾರೆ. ಆ ಮೂಲಕ ಅವರದ್ದು ಮದುವೆ ಬಳಿಕ ಎರಡನೆಯ ಸಿನಿಮಾವಾಗಿದೆ. ಇದರ ಮುಹೂರ್ತ ನೆರವೇರಿದ್ದು, ಚಿತ್ರೀಕರಣವೂ ಪ್ರಾರಂಭವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ವೀಕೆಂಡ್ ವಿತ್ ರಮೇಶ್ ನಲ್ಲಿ ವೀಕ್ಷಕರ ಆಸೆ ನೆರವೇರಿತು