Publish Date: Wed, 20 Apr 2022 (16:45 IST)
Updated Date: Wed, 20 Apr 2022 (16:46 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಈಗ ವೇದಾ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರೀಕರಣ ನಡುವೆ ಶಿವಣ್ಣ ಸೆಟ್ ನಲ್ಲಿರುವವರಿಗೆ ಪಾಯಸ ಮಾಡಿ ಸಿಹಿ ಉಣಿಸಿದ್ದಾರೆ.
ಚಿತ್ರೀಕರಣದ ಬಿಡುವಿನ ವೇಳೆ ಶಿವಣ್ಣ ಸಂಗಡಿಗರೊಂದಿಗೆ ಸೇರಿಕೊಂಡು ಪಾಯಸ ಮಾಡಲು ಸಾಥ್ ಕೊಟ್ಟಿದ್ದಾರೆ.