Select Your Language

Notifications

webdunia
webdunia
webdunia
webdunia

ಕೊನೆಗೂ ಗಾಳಿಪಟ 2 ಬಗ್ಗೆ ಅಪ್ ಡೇಟ್ ಕೊಟ್ರು ಯೋಗರಾಜ್ ಭಟ್ರು

ಕೊನೆಗೂ ಗಾಳಿಪಟ 2 ಬಗ್ಗೆ ಅಪ್ ಡೇಟ್ ಕೊಟ್ರು ಯೋಗರಾಜ್ ಭಟ್ರು
ಬೆಂಗಳೂರು , ಮಂಗಳವಾರ, 19 ಏಪ್ರಿಲ್ 2022 (08:47 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿರುವ ಗಾಳಿಪಟ 2 ಸಿನಿಮಾ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಕೊನೆಗೂ ಅಪ್ ಡೇಟ್ ಕೊಟ್ಟಿದ್ದಾರೆ.

ಚಿತ್ರೀಕರಣ ಆರಂಭವಾಗಿ ಈಗಾಗಲೇ ಮೂರು ವರ್ಷ ಕಳೆದಿದೆ. ಇದರ ನಡುವೆ ಕೊರೋನಾದಿಂದಾಗಿ ಚಿತ್ರೀಕರಣ ಸ್ಥಗಿತವಾಗಿತ್ತು. ಬಳಿ ಚಿತ್ರೀಕರಣವನ್ನೂ ಮಾಡಲಾಗಿತ್ತು. ಆದರೂ ಇದುವರೆಗೆ ಗಾಳಿಪಟ 2 ಬಗ್ಗೆ ಯಾವುದೇ ಅಪ್ ಡೇಟ್ ಸಿಕ್ಕಿರಲಿಲ್ಲ.

ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಗೆ ಚಿತ್ರತಂಡ ದಿನಾಂಕ ಘೋಷಿಸಿದೆ. ಏಪ್ರಿಲ್ 21 ರಂದು ಮೊದಲ ಹಾಡು ಬಿಡುಗಡೆಯಾಗಲಿದ್ದು, ಆ ಹಾಡಿನ ಟೀಸರ್ ಹೊರಬಿಟ್ಟಿರುವ ಭಟ್ಟರು ಎಲ್ಲರ ಕುತೂಹಲ ಹೆಚ್ಚಿಸಿದ್ದಾರೆ. ಪರೀಕ್ಷೆ ಕುರಿತಾದ ಹಾಸ್ಯಮಯ ಸಾಲಿನ ಹಾಡುಗಳು ಏಪ್ರಿಲ್ 21 ರಂದು ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕು ದಿನಕ್ಕೆ 500 ಕೋಟಿ ದಾಟಿದ ಕೆಜಿಎಫ್ 2 ಗಳಿಕೆ