Publish Date: Wed, 20 Apr 2022 (11:27 IST)
Updated Date: Wed, 20 Apr 2022 (09:30 IST)
ಬೆಂಗಳೂರು: ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯಿ ಯಶ್ ಗೆ ನಾಯಕಿಯಾಗಿ ಅಭಿನಯಿಸಿದ್ದ ಶ್ರೀನಿಧಿ ಶೆಟ್ಟಿಗೆ ಈಗ ಭರ್ಜರಿ ಆಫರ್ ಗಳು ಬರುತ್ತಿವೆ.
ಮಂಗಳೂರು ಮೂಲದ ಚೆಲುವೆಗೆ ಈಗ ಪರಭಾಷೆಗಳಿಂದಲೂ ಭಾರೀ ಆಫರ್ ಗಳು ಬರುತ್ತಿವೆಯಂತೆ. ಕೆಜಿಎಫ್ ನಲ್ಲಿ ಅವರ ಪಾತ್ರ ಕಡಿಮೆಯಾದರೂ ತಮಗೆ ಸಿಕ್ಕ ಪಾತ್ರದಲ್ಲೇ ಎಲ್ಲರ ಗಮನ ಸೆಳೆದಿದ್ದರು.
ಇದೀಗ ಶ್ರೀನಿಧಿ ಶೆಟ್ಟಿಗೆ ತಮಿಳಿನ ಸ್ಟಾರ್ ನಟ ಸೂರ್ಯ ಜೊತೆ ನಟಿಸುವ ಅವಕಾಶ ಬಂದಿದೆ. ಸೂರ್ಯ ಜೊತೆ ಮುಂದಿನ ಸಿನಿಮಾ ಮಾಡಲಿರುವ ಶ್ರೀನಿಧಿಗೆ ಇನ್ನೂ ಸಾಕಷ್ಟು ಆಫರ್ ಗಳು ಬಂದಿದ್ದು, ಯಾವುದನ್ನೂ ಇನ್ನೂ ಫೈನಲ್ ಮಾಡಿಲ್ಲ ಎಂಬ ಸುದ್ದಿಯಿದೆ.