Select Your Language

Notifications

webdunia
webdunia
webdunia
webdunia

ಹಿರಿಯ ನಿರ್ದೇಶಕ, ನಿರ್ಮಾಪಕ ಟಿ.ರಾಮರಾವ್‌ ಇನ್ನಿಲ್ಲ!

director T Rama RaoChennai ಚೆನ್ನೈ ಟಿ. ರಾಮರಾವ್‌ ನಿರ್ದೇಶಕ
bengaluru , ಬುಧವಾರ, 20 ಏಪ್ರಿಲ್ 2022 (16:21 IST)

ತೆಲುಗು, ತಮಿಳು, ಕನ್ನಡ ಅಲ್ಲದೇ ಹಿಂದಿಯಲ್ಲಿ ಹಲವಾರು ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿದ್ದ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ತಾತನೇನಿ ರಾಮರಾವ್‌ ನಿಧನರಾಗಿದ್ದಾರೆ. ಅವರಿಗೆ ೮೩ ವರ್ಷ ವಯಸ್ಸಾಗಿತ್ತು.

ರಜನಿಕಾಂತ್‌, ಕಮಲ್‌ ಹಾಸನ್‌, ಅಮಿತಾಬ್‌ ಬಚ್ಚನ್‌, ಶ್ರೀದೇವಿ, ಚಿರಂಜೀವಿ, ಎನ್‌ ಟಿಆರ್‌ ಸೇರಿದಂತೆ ಹಲವು ಖ್ಯಾತ ನಟರಿಗೆ ನಿರ್ದೇಶನ ಮಾಡಿದ್ದ ಸ್ಟಾರ್‌ ನಿರ್ದೇಶಕರೇಂದೇ ಗುರುತಿಸಿಕೊಂಡಿದ್ದ ಟಿ. ರಾಮರಾವ್‌ ಚೆನ್ನೈನಲ್ಲಿ ಬುಧವಾರ ಅಸುನೀಗಿದ್ದಾರೆ.

ರಾಮರಾವ್‌ ಅವರ ಪತ್ನಿ ಜಯಶ್ರೀ, ಮಕ್ಕಳಾದ ಚಾಮುಂಡೇಶ್ವರಿ, ನಾಗಾ ಸುಶೀಲಾ, ಅಜಯ್‌ ಮತ್ತು ಕುಟುಂಬದ ಸದಸ್ಯರನ್ನು ಅಗಲಿದ್ದಾರೆ. ರಾಮ ರಾವ್‌ ಅವರ ಅಂತ್ಯಕ್ರಿಯೆ ಇಂದೇ ಚೆನ್ನೈನಲ್ಲಿ ನಡೆಯಲಿದೆ.

ನವರಾತ್ರಿ, ಬ್ರಹ್ಮಚಾರಿ, ಇಲ್ಲಾಲು, ಪಾಂಡವಿ ಜೀವಿತಮ್‌, ಅಂಧಾ ಕಾನೂನ್‌, ನಾಚೆ ಮಯೂರಿ, ಮುಕಾಬಲ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಶ್ರೀ ಲಕ್ಷ್ಮೀ ಪ್ರೊಡಾಕ್ಷನ್‌ ಮೂಲಕ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. 


Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಮುಂದಿನ ಸಿನಿಮಾ ಯಾವುದು ಗೊತ್ತಾ?