Publish Date: Wed, 20 Apr 2022 (10:16 IST)
Updated Date: Wed, 20 Apr 2022 (10:18 IST)
ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್ವಾಲ್-ಗೌತಮ್ ದಂಪತಿ ಗಂಡುಮಗುವಿನ ಪೋಷಕರಾಗಿದ್ದಾರೆ.
ಕೆಲವು ದಿನಗಳ ಮೊದಲು ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಖುಷಿ ವಿಚಾರ ಹಂಚಿಕೊಂಡಿದ್ದರು. ಇದೀಗ ಕಾಜಲ್ ಗಂಡುಮಗುವಿಗೆ ಜನ್ಮ ನೀಡಿರುವುದಾಗಿ ವರದಿಯಾಗಿದೆ.
ಆದರೆ ಕಾಜಲ್ ಆಗಲೀ, ಗೌತಮ್ ಆಗಲೀ ಇದುವರೆಗೆ ಈ ಸುದ್ದಿಯನ್ನು ಅಧಿಕೃತವಾಗಿ ಹೇಳಿಲ್ಲ. ಹಾಗಿದ್ದರೂ ದಂಪತಿಗೆ ಶುಭಾಶಯಗಳ ಸುರಿಮಳೆಯಾಗುತ್ತಿದೆ.