ಮುಂಬೈ: ಆರ್ ಆರ್ ಆರ್, ಕೆಜಿಎಫ್ 2 ನಂತಹ ಪ್ಯಾನ್ ಇಂಡಿಯಾ ಸಿನಿಮಾಗಳ ಎದುರು ಬಾಲಿವುಡ್ ಸಿನಿಮಾಗಳು ತಲೆ ಎತ್ತಲೂ ಹಿಂಜರಿಯುವ ಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಗೆ ಕಾರಣವೇನೆಂದು ನಟ ಸಂಜಯ್ ದತ್ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳ ಎದುರು ಬಾಲಿವುಡ್ ಸಿನಿಮಾಗಳು ಸೋಲುತ್ತಿರುವುದೇಕೆ ಎಂದು ಸಂಜಯ್ ದತ್ ವಿವರಿಸಿದ್ದಾರೆ.
ನಾವು ಸಿನಿಮಾಗಳನ್ನು ಲಾಭದ ಲೆಕ್ಕಾಚಾರದಲ್ಲಿ ನೋಡುತ್ತಿದ್ದೇವೆ. ನಮ್ಮ ಸಿನಿಮಾಗಳು ನೈಜತೆಗಿಂತ ದೊಡ್ಡ ಹೀರೋಯಿಸಂ ಇಲ್ಲ ಎನ್ನುವುದನ್ನು ಮರೆತಿದ್ದಾರೆ. ಕತೆಗೆ ಪ್ರಾಮುಖ್ಯತೆ ಕೊಡುವ ಹಳೆಯ ಅಭಿರುಚಿಯ ಸಿನಿಮಾಗಳು ಮತ್ತೆ ಬಾಲಿವುಡ್ ನಲ್ಲಿ ಬರಬಹುದು ಎಂಬ ನಿರೀಕ್ಷೆಯಿದೆ ಎಂದು ಸಂಜಯ್ ದತ್ ಹೇಳಿದ್ದಾರೆ.