Select Your Language

Notifications

webdunia
webdunia
webdunia
webdunia

ಕೋರ್ಟ್ ನಿಂದ ಬಿಗ್ ರಿಲೀಫ್ ಪಡೆದ ನಿರ್ದೇಶಕ ಶಂಕರ್

ಕೋರ್ಟ್ ನಿಂದ ಬಿಗ್ ರಿಲೀಫ್ ಪಡೆದ ನಿರ್ದೇಶಕ ಶಂಕರ್
ಹೈದರಾಬಾದ್ , ಸೋಮವಾರ, 5 ಏಪ್ರಿಲ್ 2021 (10:47 IST)
ಹೈದರಾಬಾದ್ : ನಿರ್ದೇಶಕ ಶಂಕರ್ ಮತ್ತು ಲೈಕಾ ಪ್ರೊಡಕ್ಷನ್ ಹೌಸ್ ನಡುವೆ ಕೋರ್ಟ್ ನಲ್ಲಿ ಸಂಘರ್ಷ ನಡೆಯುತ್ತಿರುವ ವಿಚಾರ ಎಲ್ಲರಿಗೂ ತಿಳಿದೆ ಇದೆ. ಇದೀಗ ಮದ್ರಾಸ್ ಹೈಕೋರ್ಟ್ ನಿಂದ ನಿರ್ದೇಶಕ ಶಂಕರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ ಎಂಬುದಾಗಿ ತಿಳಿದುಬಂದಿದೆ.

ಲೈಕಾ ಪ್ರೊಡಕ್ಷನ್ ನಿರ್ಮಿಸುತ್ತಿರುವ ಇಂಡಿಯನ್ 2 ಚಿತ್ರವನ್ನು ನಿರ್ದೇಶಕ ಶಂಕರ್ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕಾಗಿ ಈಗಾಗಲೇ 150ಕೋಟಿ ರೂ ಖರ್ಚು ಮಾಡಲಾಗಿದ್ದು, 80 ಪ್ರತಿಶತದಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಆದರೆ ಶಂಕರ್ ಅವರು ಆ ಚಿತ್ರವನ್ನು ಬಿಟ್ಟು ಮುಂದಿನ ಚಿತ್ರದ ಕಡೆಗೆ ಗಮನಹರಿಸಿದ್ದಾರೆ.

 ಹೀಗಾಗಿ ಲೈಕಾ ಪ್ರೊಡಕ್ಷನ್ ಹೌಸ್ ಈ ಬಗ್ಗೆ ಶಂಕರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಶಂಕರ್ ಬೇರೆ ಸಿನಿಮಾ ಮುಂದಿನ ಪ್ರಾಜೆಕ್ಟ್ ಗೆ ತೆರಳದಂತೆ ತಡೆಯೊಡ್ಡುವಂತೆ ಕೋರಿದೆ. ಆದರೆ ಈ ಕೇಸ್ ನ ವಿಚಾರಣೆ ನಡೆಸಿದ ಕೋರ್ಟ್  ಶಂಕರ್ ಮುಂದಿನ ಯೋಜನೆಗೆ ಹೋಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಆದರೆ ಈ ವಿಷಯದ ಬಗ್ಗೆ ಶಂಕರ್ ಸ್ಪಷ್ಟನೆ ನೀಡುವಂತೆ ಕೇಳಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಯುವರತ್ನ’ದ ವಿಘ್ನ ನಿವಾರಣೆಯಾದ ಬೆನ್ನಲ್ಲೇ ರಾಯರ ದರ್ಶನಕ್ಕೆ ಹೊರಟ ಪುನೀತ್