Select Your Language

Notifications

webdunia
webdunia
webdunia
webdunia

‘ಯುವರತ್ನ’ದ ವಿಘ್ನ ನಿವಾರಣೆಯಾದ ಬೆನ್ನಲ್ಲೇ ರಾಯರ ದರ್ಶನಕ್ಕೆ ಹೊರಟ ಪುನೀತ್

ಯುವರತ್ನ
ಬೆಂಗಳೂರು , ಸೋಮವಾರ, 5 ಏಪ್ರಿಲ್ 2021 (10:34 IST)
ಬೆಂಗಳೂರು: ಯುವರತ್ನ ಸಿನಿಮಾಗೆ ಇದ್ದ ಅಡೆತಡೆಗಳು ನಿವಾರಣೆಯಾದ ಬೆನ್ನಲ್ಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಚಿತ್ರತಂಡದ ಜೊತೆಗೆ ಮಂತ್ರಾಲಯಕ್ಕೆ ಹೊರಟಿದ್ದಾರೆ.


ಪುನೀತ್ ಜೊತೆಗೆ ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ಕಾರ್ತಿಕ್ ಗೌಡ, ನವರಸನಾಯಕ ಜಗ್ಗೇಶ್ ಕೂಡಾ ಸಾಥ್ ಕೊಟ್ಟಿದ್ದಾರೆ.

ಯುವರತ್ನ ಸಿನಿಮಾ ಪ್ರದರ್ಶನಕ್ಕೆ ಏಪ್ರಿಲ್ 7 ರವರೆಗೆ ಥಿಯೇಟರ್ ಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ ಕೊಟ್ಟ ಬೆನ್ನಲ್ಲೇ ಪುನೀತ್ ಮತ್ತು ತಂಡ ದೇವರ ದರ್ಶನಕ್ಕೆ ಹೊರಟಿದೆ. ಯುವರತ್ನ ಬಿಡುಗಡೆಗೆ ಮೊದಲೂ ಚಿತ್ರತಂಡ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿತ್ತು. ಈಗ ಸಿನಿಮಾ ಯಶಸ್ವಿಯಾದ ಬೆನ್ನಲ್ಲೇ ಮತ್ತೆ ದೇವಾಲಯ ದರ್ಶನಕ್ಕೆ ಹೊರಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾಗೆ ಕೊರೋನಾ