ಬೆಂಗಳೂರು: ನಮಗೆ ಜವಾಬ್ಧಾರಿಯ ಅರಿವಿದೆ. ಸೂಚನೆ ಕೊಡದೇ ಜಾರಿ ಮಾಡಿ ಚಿತ್ರರಂಗವನ್ನು ಬಲಿಕೊಡಬೇಡಿ! ಹೀಗಂತ ರಾಕಿಂಗ್ ಸ್ಟಾರ್ ಯಶ್ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.
ಚಿತ್ರಮಂದಿರಗಳಲ್ಲಿ ಶೇ.50 ಸೀಟು ಭರ್ತಿಗೆ ಅವಕಾಶ ನೀಡಿದ ಸರ್ಕಾರದ ನಿರ್ಧಾರ ಸ್ಯಾಂಡಲ್ ವುಡ್ ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಕೆಲವು ನಟ-ನಿರ್ಮಾಪಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಯಶ್ ಕೂಡಾ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ನಮ್ಮಲ್ಲಿ ಜಾಗೃತಿ ಮೂಡಿದೆ. ಜವಾಬ್ಧಾರಿಯೂ ಇದೆ. ಹಸಿವಿಗಿಂತ ದೊಡ್ಡ ಖಾಯಿಲೆ ಇಲ್ಲ. ನಿರ್ಬಂಧನೆಗಳು ನಮ್ಮ ಬದುಕಿಗೆ ಸಹಾಯವಾಗಬೇಕೇ ಹೊರತು, ಮುಳುವಾಗಬಾರದು. ಚಿತ್ರರಂಗದ ಮೇಲಿನ ಹಠಾತ್ ಧೋರಣೆ ಖಂಡನೀಯ. ಎಲ್ಲರಿಗೂ ದುಡಿಯುವ ಅವಕಾಶ ಇದೆ, ಚಿತ್ರರಂಗಕ್ಕೆ ಯಾಕಿಲ್ಲ? ಸೂಚನೆ ಕೊಡದೇ ಜಾರಿ ಮಾಡಿರುವ ಈ ನಿರ್ಬಂಧನೆಗಳಿಂದ ಚಿತ್ರರಂಗ ಬಲಿ! ಎಂದು ರಾಕಿಂಗ್ ಸ್ಟಾರ್ ಯಶ್ ಆಕ್ರೋಶ ಹೊರಹಾಕಿದ್ದಾರೆ.