Publish Date: Mon, 05 Apr 2021 (10:23 IST)
Updated Date: Mon, 05 Apr 2021 (10:24 IST)
ಬೆಂಗಳೂರು: ಕೊರೋನಾ ಎರಡನೇ ಅಲೆಗೆ ಮತ್ತೊಬ್ಬ ಸೆಲೆಬ್ರಿಟಿ ಟಾರ್ಗೆಟ್ ಆಗಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಸದ್ಯಕ್ಕೆ ಜನ್ಯಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಸಣ್ಣ ಪ್ರಮಾಣದ ಕೊರೋನಾ ಲಕ್ಷಣಗಳಿಂದ ಬಳಲುತ್ತಿರುವ ಅರ್ಜುನ್ ಜನ್ಯಾ ಮುನ್ನಚ್ಚೆರಿಕೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಜನ್ಯಾ ಆಂಜಿಯೋಪ್ಲಾಸ್ಟಿಗೊಳಗಾಗಿದ್ದರು. ಹೀಗಾಗಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ರಿಯಾಲಿಟಿ ಶೋ ತೀರ್ಪುಗಾರರಾಗಿರುವ ಅರ್ಜುನ್ ಜನ್ಯಾ ಮುಂದಿನ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳಲ್ಲ.