ಬೆಂಗಳೂರು: ರಾಜ್ಯದಲ್ಲಿ ಥಿಯೇಟರ್ ಗಳಲ್ಲಿ ಶೇ. 50 ಹಾಜರಾತಿಗೆ ಮಾತ್ರ ಅವಕಾಶ ಕೊಟ್ಟ ಸರ್ಕಾರದ ನಿರ್ಧಾರ ಚಿತ್ರರಂಗದ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಬಗ್ಗೆ ನಟ ಜೆಕೆ ವ್ಯಂಗ್ಯ ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಜೆಕೆ ಸರ್ಕಾರದ ನಿರ್ಧಾರವನ್ನು ವ್ಯಂಗ್ಯ ಮಾಡಿದ್ದಾರೆ. ಎಲೆಕ್ಷನ್ ಮುಗಿಯುವವರೆಗೂ ಹೊರಗಡೆ ಓಡಾಡಿಕೊಂಡು ಮಜಾ ಮಾಡಿ. ಆಮೇಲೆ ಏನಾಗುತ್ತೋ ಗೊತ್ತಿಲ್ಲ. ಮಾಸ್ಕ್ ಹಾಕಿಕೊಳ್ಳಿ ಎಂದು ಜೆಕೆ ವ್ಯಂಗ್ಯವಾಗಿ ಹೇಳಿದ್ದಾರೆ.
ಯುವರತ್ನ ಚಿತ್ರತಂಡದ ಮನವಿ ಮೇರೆಗೆ ಸರ್ಕಾರ ಏಪ್ರಿಲ್ 7 ರವರೆಗೆ ಮಾತ್ರ ಥಿಯೇಟರ್ ಗಳಲ್ಲಿ ಶೇ. 100 ಮಂದಿಗೆ ಅವಕಾಶ ನೀಡಲು ನಿರ್ಧರಿಸಿದೆ. ಆದರೆ ಅದಾದ ಬಳಿಕ ಮತ್ತೆ ಶೇ.50 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದು ಬಳಿಕ ಬಿಡುಗಡೆಯಾಗುವ ಸಿನಿಮಾಗಳ ಮೇಲೆ ಪರಿಣಾಮ ಬೀರಲಿದೆ.