Select Your Language

Notifications

webdunia
webdunia
webdunia
webdunia

ಈ ತಿಂಗಳು ದುಪ್ಪಟ್ಟಾಗಲಿದೆ ಕೊರೋನಾ ಸೋಂಕು:ಏಮ್ಸ್ ಎಚ್ಚರಿಕೆ

ಈ ತಿಂಗಳು ದುಪ್ಪಟ್ಟಾಗಲಿದೆ ಕೊರೋನಾ ಸೋಂಕು:ಏಮ್ಸ್ ಎಚ್ಚರಿಕೆ
ನವದೆಹಲಿ , ಭಾನುವಾರ, 4 ಏಪ್ರಿಲ್ 2021 (10:28 IST)
ನವದೆಹಲಿ: ಕೊರೋನಾ ಎರಡನೇ ಅಲೆ ಈ ತಿಂಗಳಲ್ಲಿ ಮಾರಕವಾಗಬಹುದು. ಕಳೆದ ತಿಂಗಳಿಗಿಂತಲೂ ಅಧಿಕ ಸೋಂಕು ಈ ತಿಂಗಳು ಕಾಣಿಸಿಕೊಳ್ಳಬಹುದು ಎಂದು ದೆಹಲಿಯ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.


ದೇಶದ‍ಲ್ಲಿ ಮತ್ತೆ ಕೊರೋನಾ ತಾಂಡವವಾಡುತ್ತಿದ್ದು, ಈ ಪರಿಸ್ಥಿತಿ ಈ ತಿಂಗಳು ಇನ್ನಷ್ಟು ಬಿಗಡಾಯಿಸಬಹುದು. ಈಗಾಗಲೇ ಚಿಂತಾಜನಕ ಸ್ಥಿತಿಗೆ ತಲುಪಿದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಹೀಗಾಗಿ ಜನರು ಅತೀವ ಎಚ್ಚರಿಕೆ, ನಿಯಮ ಪಾಲಿಸಬೇಕು. ಹೊರಗಡೆ ಹೋಗುವಾಗ ಮಾಸ್ಕ್ ಬಳಕೆ,  ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ಕೊರೋನಾ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿದೆ. ಇದು ಇನ್ನಷ್ಟು ಹೆಚ್ಚಾಗುವ ಸಾಧ‍್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಮಗುವಿಗೆ ಜನ್ಮವಿತ್ತ ಅಪ್ರಾಪ್ತ ಬಾಲಕಿ: ಲೈಂಗಿಕ ದೌರ್ಜನ್ಯ ಕೇಸ್ ದಾಖಲು