Publish Date: Sun, 04 Apr 2021 (10:20 IST)
Updated Date: Sun, 04 Apr 2021 (10:21 IST)
ಮುಂಬೈ: ಕೊರೋನಾ ಎರಡನೇ ಅಲೆ ಸೆಲೆಬ್ರಿಟಿಗಳಿಗೇ ಮಾರಕವಾಗುತ್ತಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಇದೀಗ ಕೊರೋನಾ ಸೋಂಕು ತಗುಲಿದ ಸುದ್ದಿ ಬಂದಿದೆ.
ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅಕ್ಷಯ್ ನನಗೆ ಕೊರೋನಾ ಬಂದಿದೆ. ನಾನೀಗ ನಿಯಮದಂತೆ ಐಸೋಲೇಷನ್ ಗೊಳಗಾಗಿದ್ದೇನೆ. ಕ್ವಾರಂಟೈನ್ ನಲ್ಲಿ ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕ ಬಂದವರೆಲ್ಲಾ ಪರೀಕ್ಷೆಗೊಳಗಾಗಿ ಎಂದು ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಬಾಲಿವುಡ್ ನಟ ಅಮೀರ್ ಖಾನ್, ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರು ಕೊರೋನಾ ಸೋಂಕಿತರಾಗಿದ್ದಾರೆ. ಇದೀಗ ಆ ಪಟ್ಟಿಗೆ ಅಕ್ಷಯ್ ಕುಮಾರ್ ಸೇರಿಕೊಂಡಿದ್ದಾರೆ.