Select Your Language

Notifications

webdunia
webdunia
webdunia
webdunia

ವಿಜಯ್ ತಲಪತಿ 65’ ಚಿತ್ರದಲ್ಲಿ ವಿಲನ್ ಆಗುತ್ತಾರಾ ಈ ಬಾಲಿವುಡ್ ನಟ?

ವಿಜಯ್ ತಲಪತಿ 65’ ಚಿತ್ರದಲ್ಲಿ ವಿಲನ್ ಆಗುತ್ತಾರಾ ಈ ಬಾಲಿವುಡ್ ನಟ?
ಚೆನ್ನೈ , ಶನಿವಾರ, 3 ಏಪ್ರಿಲ್ 2021 (13:14 IST)
ಚೆನ್ನೈ : ಮಾಸ್ಟರ್ ಚಿತ್ರದ ಬಳಿಕ ವಿಜಯ್ ಅಭಿನಯದ  ‘ತಲಪತಿ 65’ ಚಿತ್ರವನ್ನು ಮಾರ್ಚ್ 31ರಂದು ಭವ್ಯ ಪೂಜೆಗಳೊಂದಿಗೆ ಆರಂಭಿಸಲಾಗಿದೆ. ಈ ಚಿತ್ರವನ್ನು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿದ್ದು, ಸನ್ ಪಿಕ್ಚರ್ಸ್ ನಿರ್ಮಿಸುತ್ತಿದ್ದಾರೆ.

ಈ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ ನ ಜನಪ್ರಿಯ ನಟ  ವಿದ್ಯುತ್ ಜಮ್ವಾಲ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಹಾಗಾಗಿ ವಿಜಯ್ ‘ತುಪಕ್ಕಿ’  ಚಿತ್ರದಲ್ಲಿ ಖಳನಾಯಕನಾಗಿ ವಿದ್ಯಾತ್ ಮಾಡಿದ ನಟನೆಯನ್ನು ನೆನೆಪಿಸಿಕೊಳ್ಳುತ್ತಾ ವಿಜಯ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಆದರೆ ನಟ ವಿದ್ಯಾತ್ ಈ ಬಗ್ಗೆ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿ, ತಲಪತಿ 65 ಚಿತ್ರಕ್ಕಾಗಿ ತನ್ನನ್ನು ಯಾರು ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

“11th Hour” ವೆಬ್ ಸರಣಿಗಾಗಿ ನಟಿ ತಮನ್ನಾ ಭಾಟಿಯಾ ಪಡೆದ ಸಂಭಾವನೆ ಎಷ್ಟು ಗೊತ್ತಾ?