ಮುಂಬೈ: ಕಳೆದ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಸಾಲು ಸಾಲು ಕ್ರಿಕೆಟಿಗರು ಕೊರೋನಾ ನೆಪವೊಡ್ಡಿ ಕೊನೆಯ ಕ್ಷಣದಲ್ಲಿ ಐಪಿಎಲ್ ನಿಂದ ಹೊರಬಿದ್ದು, ತಂಡವನ್ನು ಸಂಕಷ್ಟಕ್ಕೆ ನೂಕಿದ್ದರು. ಈಗ ಮತ್ತೆ ಅದೇ ಚಾಳಿ ಶುರುವಾಗಿದೆ.
									
										
								
																	
ಐಪಿಎಲ್ 14 ಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ಆಸ್ಟ್ರೇಲಿಯಾ ಮೂಲದ ಜೋಶ್ ಹೇಝಲ್ ವುಡ್ ಕೂಟದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ. ಸತತವಾಗಿ ಬಯೋ ಬಬಲ್ ವಾತಾವರಣದಲ್ಲಿದ್ದು, ಸುಸ್ತಾಗಿದೆ. ಹೀಗಾಗಿ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ಐಪಿಎಲ್ ನಿಂದ ಹೊರಬರುತ್ತಿರುವುದಾಗಿ ಹೇಳಿದ್ದಾರೆ.
									
			
			 
 			
 
 			
			                     
							
							
			        							
								
																	ಇನ್ನು, ಹೇಝಲ್ ವುಡ್ ಬದಲಿಗೆ ಸಿಎಸ್ ಕೆ ಯಾರನ್ನು ತಂಡಕ್ಕೆ ಸೇರ್ಪಡೆಗೊಳಿಸಬಹುದು ಎಂಬ ಬಗ್ಗೆ ಈಗಾಗಲೇ ಊಹಾಪೋಹಗಳು ನಡೆದಿವೆ. ಹರಾಜು ಪ್ರಕ್ರಿಯೆ ವೇಳೆ ಬಿಕರಿಯಾಗದೇ ಉಳಿದಿದ್ದ ಏರಾನ್ ಫಿಂಚ್, ಅಲೆಕ್ಸ್ ಕ್ಯಾರೀ, ಶಾನ್ ಮಾರ್ಷ್ ಮುಂತಾದವರ ಹೆಸರು ಕೇಳಿಬರುತ್ತಿದೆ.