Publish Date: Thu, 01 Apr 2021 (10:58 IST)
Updated Date: Thu, 01 Apr 2021 (11:02 IST)
ಚೆನ್ನೈ: ಐಪಿಎಲ್ 14 ರಲ್ಲಿ ಪಾಲ್ಗೊಳ್ಳಲು ರಾಯಲ್ ಚಾಲೆಂಜರ್ಸ್ ತಂಡದ ಜನಪ್ರಿಯ ಆಟಗಾರ ಎಬಿಡಿ ವಿಲಿಯರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
Photo Courtesy: RCB Twitter
ಚೆನ್ನೈನಲ್ಲಿ ಬೀಡುಬಿಟ್ಟಿರುವ ಆರ್ ಸಿಬಿ ಆಟಗಾರರ ಬಯೋ ಬಬಲ್ ವಲಯಕ್ಕೆ ಎಬಿಡಿ ಆಗಮನದ ಸುದ್ದಿ ತಿಳಿಯುತ್ತಿದ್ದಂತೇ ಆರ್ ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹುಯಿಲೆಬ್ಬಿಸಿದ್ದಾರೆ.
ಆರ್ ಸಿಬಿಯಲ್ಲಿ ವಿರಾಟ್ ಕೊಹ್ಲಿಯಷ್ಟೇ ಜನಪ್ರಿಯ ಆಟಗಾರ ಎಬಿಡಿ. ಇದುವರೆಗೆ ನಡೆದ ಐಪಿಎಲ್ ನಲ್ಲಿ ಆರ್ ಸಿಬಿಯ ಆಪತ್ಬಾಂಧವನಾಗಿದ್ದ ಎಬಿಡಿ ಈ ಬಾರಿಯೂ ತಂಡಕ್ಕೆ ಪ್ರಬಲ ಅಸ್ತ್ರ. ಎಬಿಡಿ ಬಯೋ ಬಬಲ್ ಸೇರಿಕೊಂಡ ವಿಚಾರವನ್ನು ತಂಡ ಟ್ವೀಟ್ ಮಾಡಿದೆ. ವಿರಾಟ್ ಕೊಹ್ಲಿ ಕೂಡಾ ಇಂದು ಚೆನ್ನೈಗೆ ಬಂದಿಳಿಯಲಿದ್ದಾರೆ.