Select Your Language

Notifications

webdunia
webdunia
webdunia
webdunia

ಡೆಲ್ಲಿ ಕ್ಯಾಪಿಟಲ್ಸ್ ಗೆ ರಿಷಬ್ ಪಂತ್ ನಾಯಕ

ಡೆಲ್ಲಿ ಕ್ಯಾಪಿಟಲ್ಸ್ ಗೆ ರಿಷಬ್ ಪಂತ್ ನಾಯಕ
ನವದೆಹಲಿ , ಬುಧವಾರ, 31 ಮಾರ್ಚ್ 2021 (10:08 IST)
ನವದೆಹಲಿ: ಈ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಮುನ್ನಡೆಸಲಿದ್ದಾರೆ.


ಇಂಗ್ಲೆಂಡ್ ಸರಣಿ ವೇಳೆ ನಾಯಕ ಶ್ರೇಯಸ್ ಐಯರ್ ಗೆ ಗಾಯವಾಗಿತ್ತು. ಹೀಗಾಗಿ ಅವರು ಕ್ರಿಕೆಟ್ ನಿಂದ 5-6 ತಿಂಗಳು ದೂರವಿರಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಎದ್ದಿತ್ತು.

ಆ ಪ್ರಶ್ನೆಗೆ ಈಗ ಡೆಲ್ಲಿ ಫ್ರಾಂಚೈಸಿ ಉತ್ತರ ನೀಡಿದೆ. ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿರುವ ರಿಷಬ್ ರನ್ನೇ ನಾಯಕನಾಗಿ ನೇಮಕ ಮಾಡಲಾಗಿದೆ. ರವಿಚಂದ್ರನ್ ಅಶ್ವಿನ್, ಸ್ಟೀವ್ ಸ್ಮಿತ್ ಮುಂತಾದ ಘಟಾನುಘಟಿ ಅನುಭವಿಗಳನ್ನು ಹೊಂದಿರುವ ಡೆಲ್ಲಿಯನ್ನು ಯುವ ರಿಷಬ್ ಪಂತ್ ಮುನ್ನಡೆಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುಮಗ ಜಸ್ಪ್ರೀತ್ ಬುಮ್ರಾ ಈಗ ಕ್ವಾರಂಟೈನ್ ಗೆ