Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಏಪ್ರಿಲ್ 1 ರಿಂದ ಕಿಂಗ್ ಕೊಹ್ಲಿ ಐಪಿಎಲ್ ತಯಾರಿ ಶುರು

webdunia
ಮಂಗಳವಾರ, 30 ಮಾರ್ಚ್ 2021 (11:12 IST)
ಚೆನ್ನೈ; ಐಪಿಎಲ್ 14 ಕ್ಕೆ ಕ್ಷಣಗಣನೆ ಶುರುವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಏಪ್ರಿಲ್ 1 ರಿಂದ ಆರ್ ಸಿಬಿ ಪಾಳಯ ಸೇರಿಕೊಳ್ಳಲಿದ್ದಾರೆ.

 
ಆರ್ ಸಿಬಿ ಮೊದಲ ಪಂದ್ಯಗಳನ್ನು ಚೆನ್ನೈನಲ್ಲಿ ಆಡಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್, ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಅಡಲಿದೆ. ಹೀಗಾಗಿ ಏಪ್ರಿಲ್ 1 ರಂದು ಕೊಹ್ಲಿ ಚೆನ್ನೈಗೆ ಬಂದಿಳಿಯಲಿದ್ದು, ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ.

ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಕ್ರಿಕೆಟಿಗ ಸುರೇಶ್ ರೈನಾ ಇಂದಿನಿಂದ ಮುಂಬೈನಲ್ಲಿ ಅಭ್ಯಾಸ ಆರಂಭಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಏಪ್ರಿಲ್ 9 ರಿಂದ ಕೂಟ ಆರಂಭವಾಗಲಿದ್ದು, ಎಲ್ಲಾ ಆಟಗಾರರೂ ತಮ್ಮ ಫ್ರಾಂಚೈಸಿಯನ್ನು ಸೇರಿಕೊಂಡಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಗೂ ಕೊರೋನಾ