Publish Date: Tue, 30 Mar 2021 (09:26 IST)
Updated Date: Tue, 30 Mar 2021 (09:29 IST)
ಬೆಂಗಳೂರು: ಐಪಿಎಲ್ 14 ಕ್ಕೆ ಇನ್ನೇನು ವಾರ ಉಳಿದಿದೆ. ಈ ಸಂದರ್ಭದಲ್ಲೇ ನಟ ಚಿಕ್ಕಣ್ಣ ಅವರ ಡೈಲಾಗ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.
ಅಜೇಯ್ ರಾವ್ ನಾಯಕರಾಗಿರುವ ಕೃಷ್ಣ ಟಾಕೀಸ್ ಸಿನಿಮಾದಲ್ಲಿ ಹಾಸ್ಯನಟ ಚಿಕ್ಕಣ್ಣ ಆರ್ ಸಿಬಿ ಬಗ್ಗೆ ಹೇಳುವ ತಮಾಷೆಯ ಮತ್ತು ಅಭಿಮಾನದ ಡೈಲಾಗ್ ಒಂದಿದೆ. ಯಾರು ಏನೇ ಹೇಳಿದ್ರೂ ಆರ್ ಸಿಬಿಗೆ ಸಪೋರ್ಟ್ ಮಾಡೋದನ್ನು ಬಿಡಲ್ಲ. ಹುಡ್ಗೀರನ್ನು ಚೇಂಜ್ ಮಾಡ್ತೀವಿ ಆದ್ರೆ ಆರ್ ಸಿಬಿ ಅನ್ನೋದನ್ನು ಬಿಡಲ್ಲ. ಎಬಿಸಿಡಿ ಅನ್ನೋದನ್ನು ಮರೀತೀವಿ ಆದ್ರೆ ಎಬಿಡಿ ಅನ್ನೋದನ್ನು ಮರಿಯಲ್ಲ. ಯಾರು ಮಕಕ್ಕೆ ಉಗುದ್ರೂ, ಮನೆಯವರು ಎಷ್ಟೇ ಬೈದ್ರೂ ಆರ್ ಸಿಬಿಗೇ ನಮ್ಮ ನಿಯತ್ತು ಎಂದು ಚಿಕ್ಕಣ್ಣ ಉದ್ದುದ್ದ ಡೈಲಾಗ್ ಹೊಡೀತಾರೆ.
ಈ ಡೈಲಾಗ್ ನ್ನು ಹೊರಬಿಟ್ಟಿರುವ ಚಿತ್ರತಂಡ ಅಭಿಮಾನಿಗಳಿಗೆ ಸ್ಪರ್ಧೆಯೊಂದನ್ನೂ ನೀಡಿದೆ. ಚಿಕ್ಕಣ್ಣ ಮಾಡಿರೋ ವಿಡಿಯೋಗೆ ನೀವೂ ವಿಡಿಯೋ ಮಾಡಿ 08553148441 ಎಂಬ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಡಿಯೋ ಕಳುಹಿಸಿ. ಆಯ್ದ 50 ವಿಜೇತರಿಗೆ ಚಿತ್ರತಂಡದ ಕಡೆಯಿಂದ ಭರ್ಜರಿ ಗಿಫ್ಟ್ ಕೊಡುವುದಾಗಿ ಪ್ರಕಟಿಸಿದ್ದಾರೆ.
Krishnaveni K
Publish Date: Tue, 30 Mar 2021 (09:26 IST)
Updated Date: Tue, 30 Mar 2021 (09:29 IST)