Publish Date: Fri, 26 Mar 2021 (09:09 IST)
Updated Date: Fri, 26 Mar 2021 (09:10 IST)
ಬೆಂಗಳೂರು: ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಓಪನರ್ಸ್ ಯಾರು ಎಂಬುದನ್ನು ಸ್ವತಃ ಕೋಚ್ ಮೈಕ್ ಹಸನ್ ಖಚಿತಪಡಿಸಿದ್ದಾರೆ.
ಕಳೆದ ಬಾರಿ ಐಪಿಎಲ್ ನಲ್ಲಿ ದೇವದತ್ತ್ ಪಡಿಕ್ಕಲ್ ಓಪನರ್ ಆಗಿ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ರನ್ ಮಳೆ ಸುರಿಸಿದ್ದನ್ನು ನೋಡಿ ಸದ್ಯದಲ್ಲೇ ಅವರು ಟೀಂ ಇಂಡಿಯಾಗೆ ಆಯ್ಕೆಯಾಗುವುದು ಪಕ್ಕಾ ಎಂದಿದ್ದರು.
ಆರ್ ಸಿಬಿಯಲ್ಲಿರುವ ಈ ಕನ್ನಡಿಗನ ಆಟಕ್ಕೆ ಅಭಿಮಾನಿಗಳೂ ಮನಸೋತಿದ್ದರು. ಈ ಬಾರಿ ನಾವು ಹರಾಜು ಪ್ರಕ್ರಿಯೆಗೂ ಮೊದಲೇ ಇದರ ಬಗ್ಗೆ ಚರ್ಚೆ ನಡೆಸಿದ್ದೆವು. ಅದಕ್ಕೆ ತಕ್ಕಂತೇ ಆಟಗಾರರ ಖರೀದಿ ಮಾಡಿದ್ದೆವು. ಈ ಬಾರಿ ದೇವದತ್ತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದು ಪಕ್ಕಾ ಎಂದು ಹಸನ್ ಸ್ಪಷ್ಟಪಡಿಸಿದ್ದಾರೆ.