ಮುಂಬೈ: ಐಪಿಎಲ್ 14 ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಡಿಕೊಳ್ಳುವ ಮೊದಲು ಕ್ರಿಕೆಟಿಗ ಸುರೇಶ್ ರೈನಾ ಮುಂಬೈಯಲ್ಲಿ ಐದು ದಿನಗಳ ಕಾಲ ಕ್ವಾರಂಟೈನ್ ಗೊಳಗಾಗಲಿದ್ದಾರೆ.
ರೈನಾ ನಿನ್ನೆಯೇ ಮುಂಬೈಗೆ ಬಂದಿಳಿದಿದ್ದು, ಐದು ದಿನಗಳ ಕಾಲ ಹೋಟೆಲ್ ಕೊಠಡಿಯಲ್ಲಿ ಕ್ವಾರಂಟೈನ್ ಗೊಳಗಾಗಲಿದ್ದಾರೆ. ಅದಾದ ಬಳಿಕ ಅವರು ತಂಡದ ಜೊತೆಗೆ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೊರೋನಾ ಕಾರಣದಿಂದ ಈ ಬಾರಿಯ ಪಂದ್ಯಗಳು ಸೀಮಿತ ಮೈದಾನಗಳಲ್ಲಿ ನಡೆಯುತ್ತಿವೆ. ಅದರಲ್ಲೂ ಎಲ್ಲಾ ತಂಡಗಳೂ ತಟಸ್ಥ ಸ್ಥಳದಲ್ಲಿ ಪಂದ್ಯವಾಡಲಿದೆ. ಕಳೆದ ಆವೃತ್ತಿಯಲ್ಲಿ ರೈನಾ ಕೊನೆಯ ಕ್ಷಣದಲ್ಲಿ ಐಪಿಎಲ್ ನಿಂದ ಹೊರಬಂದಿದ್ದರು. ಕಳೆದ ಆವೃತ್ತಿಯಲ್ಲಿ ತಂಡದ ಪ್ರದರ್ಶನವೂ ಕಳಪೆಯಾಗಿತ್ತು.