Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವದಲ್ಲಿ ಮುಂದುವರಿಯಲಿರುವ ಶ್ರೇಯಸ್ ಐಯರ್

webdunia
ಭಾನುವಾರ, 21 ಮಾರ್ಚ್ 2021 (09:41 IST)
ನವದೆಹಲಿ: ಕಳೆದ ಬಾರಿ ಐಪಿಎಲ್ ನಲ್ಲಿ ಡೆಲ್ಲಿ ತಂಡದ ನಾಯಕತ್ವ ವಹಿಸಿ ಗಮನಾರ್ಹ ಪ್ರದರ್ಶನ ನೀಡಿದ್ದ ಶ್ರೇಯಸ್ ಐಯರ್ ಈ ವರ್ಷವೂ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಡೆಲ್ಲಿ ಫ್ರಾಂಚೈಸಿ ಸ್ಪಷ್ಟಪಡಿಸಿದೆ.


2018 ರಲ್ಲಿ ಗೌತಮ್ ಗಂಭೀರ್ ನಾಯಕತ್ವದಿಂದ ಕೆಳಗಿಳಿದ ಮೇಲೆ ಶ್ರೇಯಸ್ ಕ್ಯಾಪ್ಟನ್ ಆಗಿ ಪದಗ್ರಹಣ ಮಾಡಿದ್ದರು. ಕಳೆದ ಆವೃತ್ತಿಯಲ್ಲಿ ಲೀಗ್ ಹಂತದಲ್ಲಿ ಡೆಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಆದರೆ ಕೊನೆಯ ಹಂತದಲ್ಲಿ ಜಾರಿಬಿತ್ತು.

ಈ ಬಾರಿ ತಂಡಕ್ಕೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಸೇರ್ಪಡೆಯಾಗಿದ್ದಾರೆ. ಹಾಗಾಗಿ ನಾಯಕತ್ವ ಸ್ಮಿತ್ ಪಾಲಾಗಲಿದೆಯೇ ಎಂಬ ಪ್ರಶ್ನೆ ಕಾಡಿತ್ತು. ಇದಕ್ಕೀಗ ಫ್ರಾಂಚೈಸಿ ಉತ್ತರ ಕೊಟ್ಟಿದೆ. ಐಯರ್ ಉದಯೋನ್ಮುಖ ನಾಯಕ. ಅವರಿಗೆ ಹಿರಿಯ ಆಟಗಾರರು ಮಾರ್ಗದರ್ಶಕರಾಗಲಿದ್ದಾರೆ ಎಂದು ಡೆಲ್ಲಿ ಫ್ರಾಂಚೈಸಿಯ ಸಿಇಒ ಕರ್ನಲ್ ವಿನೋದ್ ಬಿಷ್ತ್ ಹೇಳಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಒಂದೇ ಬದಲಾವಣೆಯಿಂದ ಗೆದ್ದ ಟೀಂ ಇಂಡಿಯಾ