Publish Date: Thu, 25 Mar 2021 (11:13 IST)
Updated Date: Thu, 25 Mar 2021 (11:14 IST)
ಚೆನ್ನೈ: ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗಾಯಾಳುಗಳ ಚಿಂತೆ ಕಾಡಿದೆ. ಆಲ್ ರೌಂಡರ್ ಜಡೇಜಾ ಈ ಆವೃತ್ತಿಗೆ ಲಭ್ಯರಿರುವುದು ಅನುಮಾನವಾಗಿದೆ.
ಆಸ್ಟ್ರೇಲಿಯಾ ಸರಣಿಯಲ್ಲಿ ಗಾಯಗೊಂಡಿದ್ದ ಜಡೇಜಾ ನಂತರ ಇಂಗ್ಲೆಂಡ್ ವಿರುದ್ಧ ನಡೆದ ತವರಿನ ಸರಣಿಯಲ್ಲೂ ಫಿಟ್ನೆಸ್ ಪಡೆದಿರಲಿಲ್ಲ. ಈ ಕಾರಣಕ್ಕೆ ಅವರು ಐಪಿಎಲ್ ಗೂ ಲಭ್ಯರಾಗುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ.
“ಈ ಬಗ್ಗೆ ನಮಗೂ ಸ್ಪಷ್ಟತೆಯಿಲ್ಲ. ಜಡೇಜಾ ತಂಡಕ್ಕೆ ಮರಳುತ್ತಾರೋ ಇಲ್ಲವೋ ಎಂದು ಗೊತ್ತಿಲ್ಲ ಎಂದು ಸಿಎಸ್ ಕೆ ತಂಡದ ಮೂಲಗಳು ಹೇಳಿವೆ. ಈಗಾಗಲೇ ಕೆಲವು ಆಟಗಾರರು ಅಭ್ಯಾಸ ನಡೆಸಲು ಮುಂಬೈಗೆ ಬಂದಿಳಿದಿದ್ದಾರೆ. ಜಡೇಜಾ ಈಗಲೂ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.