Publish Date: Thu, 25 Mar 2021 (11:01 IST)
Updated Date: Thu, 25 Mar 2021 (11:04 IST)
ಪುಣೆ: ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪುತ್ರ ಅಗಸ್ತ್ಯನನ್ನು ಎತ್ತಿಕೊಂಡ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಫೋಟೋ ನೋಡಿ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ತಮಾಷೆ ಮಾಡಿದ್ದಾರೆ. ಕೆಎಲ್, ಅಗಸ್ತ್ಯನನ್ನು ಹಿಡಿದಿರುವುದನ್ನು ನೋಡಿ. ಭಾರತೀಯ ವಿಕೆಟ್ ಕೀಪರ್ ಗಳು ಯಾವತ್ತೂ ಉತ್ತಮ ಬೇಬಿ ಸಿಟ್ಟರ್ ಗಳು ಎಂದು ಜಾಫರ್ ಕಾಲೆಳೆದಿದ್ದಾರೆ.
ಈ ಹಿಂದೆ ವಿಕೆಟ್ ಕೀಪರ್ ರಿಷಬ್ ಪಂತ್ ಬೇಬಿ ಸಿಟ್ಟರ್ ಎಂದು ಸ್ಲೆಡ್ಜಿಂಗ್ ಗೊಳಗಾಗಿದ್ದು ನೆನಪಿರಬಹುದು. ಅದನ್ನೇ ನೆನಪಿಸಿ ಜಾಫರ್ ಈಗ ರಾಹುಲ್ ಗೆ ತಮಾಷೆ ಮಾಡಿದ್ದಾರೆ. ಟೀಂ ಇಂಡಿಯಾ ಲಂಚ್ ಪಾರ್ಟಿಯ ಫೋಟೋದಲ್ಲಿ ಹಾರ್ದಿಕ್ ಮುಂದಿನ ಸಾಲಿನಲ್ಲಿದ್ದರೆ, ರಾಹುಲ್ ಎಲ್ಲರಿಗಿಂತ ಹಿಂದೆ ಅಗಸ್ತ್ಯನನ್ನು ಹಿಡಿದುಕೊಂಡಿರುವ ದೃಶ್ಯವಿದೆ.