Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯ ಬಹುದೊಡ್ಡ ತಲೆನೋವು ನಿವಾರಿಸಿದ ಕೆಎಲ್ ರಾಹುಲ್

ವಿರಾಟ್ ಕೊಹ್ಲಿಯ ಬಹುದೊಡ್ಡ ತಲೆನೋವು ನಿವಾರಿಸಿದ ಕೆಎಲ್ ರಾಹುಲ್
ಪುಣೆ , ಗುರುವಾರ, 25 ಮಾರ್ಚ್ 2021 (09:16 IST)
ಪುಣೆ: ಟೀಂ ಇಂಡಿಯಾದಲ್ಲಿ ಎಲ್ಲರಿಗೂ ಕೆಎಲ್ ರಾಹುಲ್ ರ ಫಾರ್ಮ್ ನದ್ದೇ ಚಿಂತೆಯಾಗಿತ್ತು. ನಾಯಕ ವಿರಾಟ್ ಕೊಹ್ಲಿಗೂ ಎಲ್ಲಿ ಹೋದರೂ ಇದೇ ಪ್ರಶ್ನೆ ಕೇಳಿಬರುತ್ತಿತ್ತು. ಆದರೆ ಈಗ ರಾಹುಲ್ ಆ ತಲೆನೋವು ನಿವಾರಿಸಿದ್ದಾರೆ.


ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಗಳಿಸಿದ ರಾಹುಲ್ ಕ್ಲಾಸ್ ಯಾವತ್ತೂ ಶಾಶ್ವತ ಎಂದು ಸಾಬೀತುಪಡಿಸಿದ್ದಾರೆ. ಇಷ್ಟು ದಿನಗಳ ರನ್ ಬರವನ್ನು ಒಂದೇ ಪಂದ್ಯದಲ್ಲಿ ನಿವಾರಿಸಿದ್ದಾರೆ.

ಹೀಗಾಗಿ ಇನ್ನು, ಕೊಹ್ಲಿಗೆ ಐದನೇ ಕ್ರಮಾಂಕದ ತಲೆನೋವು ಇಲ್ಲ. ರಾಹುಲ್ ಸ್ಥಾನ ತಂಡದಲ್ಲಿ ಭದ್ರವಾಗಿದೆ. ರಿಷಬ್ ಪಂತ್ ಬದಲಿಗೆ ವಿಕೆಟ್ ಕೀಪಿಂಗ್ ಕೂಡಾ ಮಾಡುವ ರಾಹುಲ್ ಸದ್ಯದ ಮಟ್ಟಿಗೆ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಕಮ್ ಫಿನಿಶರ್ ಬ್ಯಾಟ್ಸ್ ಮನ್ ರೋಲ್ ನ್ನು ನಿಭಾಯಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಸರಣಿಯಿಂದ ಹೊರಬಿದ್ದ ಶ್ರೇಯಸ್ ಐಯರ್